ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘದ ಭಜನೋತ್ಸವ ಸಮಾಪ್ತಿ

ಉಪ್ಪಳ : ಐಲ ಶ್ರೀ ದುರ್ಗಾ ಪರಮೇಶ್ವರೀ ಕ್ಷೇತ್ರದಲ್ಲಿ ಕಳೆದ 47 ವರ್ಷಗಳಿಂದ ಪ್ರತೀ ಶುಕ್ರವಾರ ಮತ್ತು ಪರ್ವದಿನಗಳಲ್ಲಿ ಭಜನಾ ಕಾರ್ಯಕ್ರಮದ ಮೂಲಕ ಶ್ರೀ ದೇವಿಯ ಸೇವೆ ಮಾಡುತ್ತಿರುವ ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಸಂಘದ 47ನೇ ವರ್ಷದ ಭಜನೋತ್ಸವ ನಿನ್ನೆ ಸೂರ್ಯೋದಯ ದಿಂದ ಸೂಯÁðಸ್ತದ ತನಕ ಶ್ರೀ ದೇವಿ ಸನ್ನಿಧಿಯಲ್ಲಿ ಜರಗಿತು. ಶ್ರೀ ಕ್ಷೇತ್ರದ ಸೇವಾ ಸಮಿತಿ ಉಪಾಧ್ಯಕ್ಷ ವಸಂತ್ ಕುಮಾರ್ ಮಯ್ಯ ತಿಂಬರ ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡಿದರು. ಬಳಿಕ ವಿವಿಧ ತಂಡಗಳಿAದ ಭಜನಾ ಕಾರ್ಯಕ್ರಮ ನಡೆದು ಸಂಜೆ ಮಂಗಳಾಚಾರಣೆ ನಡೆಯಿತು.

RELATED NEWS

You cannot copy contents of this page