ಮಾದಕ ಪದಾರ್ಥ ವಿತರಣೆಗೆ ವಾಟ್ಸಪ್ ಗ್ರೂಪ್ ರೂಪಿಸಿದ ಯುವಕ ಸೆರೆ

ಕಣ್ಣೂರು: ಎಂಡಿಎಂಎ ಸಹಿತದ ಮಾದಕ ಪದಾರ್ಥಗಳನ್ನು ವಿತರಣೆ ಮಾಡಲು ವಾಟ್ಸಪ್ ಗ್ರೂಪ್ ಸೃಷ್ಟಿಸಿದ ಯುವಕ ಸೆರೆಯಾಗಿದ್ದಾನೆ. ತಲಶ್ಶೇರಿ ಕಾಯೋತ್ ರಸ್ತೆ ನಿವಾಸಿ ರಿಯಾಸ್ ಅಂಬಾಲಿ (45)ನನ್ನು ಎಡಕ್ಕಾಡ್ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ಬಿಜುರವರ ನಿರ್ದೇಶ ಪ್ರಕಾರ ಎಸ್.ಐ. ಎನ್. ದಿಜೇಶ್ ಹಾಗೂ ತಂಡ ಸೆರೆ ಹಿಡಿದಿದೆ. ನಿನ್ನೆ ಬೆಳಿಗ್ಗೆ ಚಾಲದ ಖಾಸಗಿ ಆಸ್ಪತ್ರೆಯ ಕಾರು ಪಾರ್ಕಿಂಗ್ ಏರಿಯಾದಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ. ಕಾರು, ೮೨ ಮಿಲ್ಲಿಗ್ರಾಂ ಎಂಡಿಎಂಎಯನ್ನು ವಶಪಡಿಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಮಾದಕ ಪದಾರ್ಥ ವಿತರಿಸುವ ತಂಡದ ಪ್ರಧಾನ ಕೊಂಡಿ ಈತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page