ಕಾಸರಗೋಡು: ವಿದೇಶಕ್ಕೆ ಮಾದಕದ್ರವ್ಯ ಸಾಗಿಸಲೆತ್ನಿಸಿದ ಪ್ರಕರಣದ ಆರೋಪಿಯನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಸ್ತುತ ವಿಮಾನ ನಿಲ್ದಾಣದ ಎಮಿಗ್ರೇಶನ್ ವಿಭಾಗದ ಅಧಿಕಾರಿಗಳು ಬಂಧಿಸಿ ದ್ದಾರೆ.
ಬೇಕಲ ಕೋಟಿಕುಳಂ ನಿವಾಸಿ ಮೊಹಮ್ಮದ್ ನದೀರ್ (೩೦) ಬಂಧಿತ ಆರೋಪಿ. ಮಾದಕದ್ರವ್ಯ ಸಾಗಾಟಕ್ಕೆ ಸಂಬಂಧಿಸಿ ಮೊಹಮ್ಮದ್ ನದೀರ್‌ನ ವಿರುದ್ಧ ಮಂಗಳೂರು ಪೊಲೀಸರು ಇತ್ತೀಚೆಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿ ಆತ ನ್ಯಾಯಾಲಯದಲ್ಲಿ ಹಾಜರಾ ಗದೆ ವಿದೇಶಕ್ಕೆ ಸಾಗಿದ್ದನು. ಅದರಿಂ ದಾಗಿ ಆತನ ಪತ್ತೆಗಾಗಿ ಮಂಗಳೂರು ಪೊಲೀಸರು ಲುಕ್‌ಔಟ್ ನೋಟೀ ಸು ಜ್ಯಾರಿಗೊಳಿಸಿದ್ದರು. ಈ ಮಧ್ಯೆ ಆರೋಪಿ ನಿನ್ನೆ ಶಾರ್ಜಾದಿಂದ ವಿಮಾನದಲ್ಲಿ ಕಣ್ಣೂರು ನಿಲ್ದಾಣದಲ್ಲಿ ಬಂದಿಳಿದಿದ್ದನು. ಆಗ ಎಮಿಗ್ರೇಶನ್ ವಿಭಾಗ ದವರು ಆತನನ್ನು ಬಂಧಿಸಿ ಬಳಿಕ ಮಂಗಳೂರು ಪೊಲೀ ಸರಿಗೆ ಹಸ್ತಾಂತರಿಸಿದ್ದಾರೆ.







