ಮೀನುಗಾರಿಕಾ ಬಲೆಯಿಂದ ಸಾಮಗ್ರಿ ಕಳವು: 2.80 ಲಕ್ಷ ರೂ.ಗಳ ನಷ್ಟ

ಕುಂಬಳೆ: ಮೀನುಗಾರಿಕೆಗೆ ಬಳಸುವ ಬಲೆಯಿಂದ ಬೆಲೆಬಾಳುವ ಸಾಮಗ್ರಿ ಕಳವಿಗೀಡಾದ ಘಟನೆ ನಡೆದಿದೆ. ಆರಿಕ್ಕಾಡಿ ಕಡವತ್‌ನ ಮೊಹಮ್ಮದ್ ಕುಂಞಿಯವರು ಮೀನುಗಾರಿಕೆಗೆ ಬಳಸುವ ಬಲೆಯಿಂದ ಸಾಮಗ್ರಿ ಕಳವುಗೈಯ್ಯ ಲಾಗಿದೆ. ಬಲೆಯನ್ನು ಕುಂಬಳೆ ಸೇತುವೆ  ಸಮೀಪ ಇರಿಸಲಾಗಿತ್ತು. ಆ ಬಲೆಯನ್ನು  ಹಲವು ತುಂಡುಗಳಾಗಿ  ಮಾಡಿ ಅದರಲ್ಲಿದ್ದ ಸಾಮಗ್ರಿಗಳನ್ನು ದೋಚಲಾಗಿದೆ. ಸುಮಾರು 80 ಸಾವಿರ ರೂಪಾಯಿಗಳ ಉಪಕರಣ ಕಳವು ನಡೆದಿದೆ. ಅದೇ ರೀತಿ ಬಲೆಯನ್ನು ತುಂಡರಿಸಿ ನಾಶಗೊಳಿಸಿರುವುದರಿಂದ 2 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಮೊಹಮ್ಮದ್ ಕುಂಞಿ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖ ನಡೆಸುತ್ತಿದ್ದಾರೆ. ಇದೇ ವೇಳೆ ಬಲೆಯಿಂದ ಕಳವುಗೈದ ಸಾಮಗ್ರಿಗಳನ್ನು ಹೊಸಂಗಡಿಯ ಗುಜರಿ ಅಂಗಡಿಯೊಂದರಲ್ಲಿ ಮಾರಾಟಗೈದಿರುವುದಾಗಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page