ಕುಂಬಳೆ: ಹೃದಯ ಸಂಬಂಧ ಅಸೌಖ್ಯ ಬಾ ಧಿಸಿ ಯುವತಿ ಯೋರ್ವೆ ದುಬಾ ಯಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೀಂಜ ಮೀಯಪದವಿನ ಮುಹ ಮ್ಮದ್ ಇರ್ಶಾದ್‌ರ ಪತ್ನಿ ಮುಹ್‌ಸೀನ (24) ಮೃತಪಟ್ಟ ದುರ್ದೈವಿ. ಇವರು ದುಬಾಯಿ ಖರಾಮದಲ್ಲಿ ವಾಸಿಸು ತ್ತಿದ್ದರು. ಅಸೌಖ್ಯ ಬಾಧಿಸಿದ್ದ ಇವರನ್ನು ದುಬಾಯಿಯ ಆಸ್ಟರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತದೇಹವನ್ನು ಊರಿಗೆ ತರಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಬದಿಯಡ್ಕ ಪಾಡ್ಲಡ್ಕದ ಮುಹಮ್ಮದ್ ಕುಂಞಿ-ಮೈಮೂನ ದಂಪತಿಯ ಪುತ್ರಿಯಾದ ಮುಹ್‌ಸೀನ ಮಕ್ಕಳಾದ ಐಸಾನ್ (4), ಇಮಾದ್ (2) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







