ಮುಟ್ಟತ್ತೋಡಿ ನಿವಾಸಿ ಕಲ್ಲಿಕೋಟೆಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮುಟ್ಟತ್ತೋಡಿ ನಿವಾಸಿ ಕಲ್ಲಿಕೋಟೆಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಪಯೋಟ ನಿವಾಸಿ ಹಮೀದ್- ಅಪ್ಸ ದಂಪತಿ ಪುತ್ರ ಮುಹಮ್ಮದ್ ಸಾಬಿತ್ (21) ಮೃತಪಟ್ಟ ಯುವಕ. ಫರೂಖ್ನ ಒಂದು ಜ್ಯೂಸ್ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಳಿಗ್ಗೆ ನಾಪತ್ತೆಯಾದ ಹಿನ್ನೆಲೆಯಲ್ಲಿ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸುತ್ತಿದ್ದ ಮಧ್ಯೆ ಫರೂಖ್ನಲ್ಲಿ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿರುವುದಾಗಿ ಮಾಹಿತಿ ಲಭಿಸಿತ್ತು. ಬಳಿಕ ಗೆಳೆಯರು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಶವಾಗಾರಕ್ಕೆ ತಲುಪಿದಾಗ ಅದು ಸಾಬಿತ್ನ ಮೃತದೇಹವೆಂದು ಗುರುತು ಹಿಡಿದಿದ್ದರು. ಬಳಿಕ ಈ ಮಾಹಿತಿಯನ್ನು ಊರಿಗೆ ತಿಳಿಸಲಾಗಿದೆ. ಸಂಬಂಧಿಕರು ಹಾಗೂ ಗೆಳೆಯರು ಕಲ್ಲಿಕೋಟೆಗೆ ತೆರಳಿದ್ದಾರೆ. ಪೋಸ್ಟ್ಮಾರ್ಟಂನ ಬಳಿಕ ಮೃತದೇಹವನ್ನು ಊರಿಗೆ ತಲುಪಿಸಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ. ಮೃತದೇಹದ ಅಂಗಿಯ ಜೇಬಿನಿಂದ ಕಾಸರಗೋಡಿಗಿರುವ ರೈಲಿನ ಟಿಕೆಟ್ ಲಭಿಸಿದೆ. ಪ್ರಯಾಣ ಮಧ್ಯೆ ಬಿದ್ದು ಅಪಘಾತ ಸಂಭವಿಸಿರಬೇಕೆಂದು ಶಂಕಿಸಲಾಗಿದೆ. ಯುವಕನ ದುರಂತ ಮರಣ ಮುಟ್ಟತ್ತೋಡಿ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ.
ಮೃತ ಯುವಕ ತಂದೆ, ತಾಯಿ, ಸಹೋದರಿಯರಾದ ಶಾನಿಯಾ, ಫಾತಿಮ, ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.