ಮುಳ್ಳೇರಿಯ ಕೋ-ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೆಶೀನ್ ಉದ್ಘಾಟನೆ
ಮುಳ್ಳೇರಿಯ: ಇಲ್ಲಿನ ಕೋ-ಆಪರೇಟಿವ್ ಮೆಡಿಕಲ್ ಸೆಂಟರ್‌ನಲ್ಲಿ ಸ್ಥಾಪಿಸಲಾದ ಆಧುನಿಕ ತಂತ್ರಜ್ಞಾನದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮೆಶೀನನ್ನು ರಾಜ್ಯ ಸಹಕಾರಿ ಸಂಘ ರಿಜಿಸ್ಟ್ರಾರ್ ಡಾ. ಸಜಿತ್ ಬಾಬು ಉದ್ಘಾಟಿಸಿದರು. ಆಸ್ಪತ್ರೆ ಸಂಘದ ಅಧ್ಯಕ್ಷ ರಘುದೇವನ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ಕಾರಡ್ಕ ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿದ್ದರು. ಆಸ್ಪತ್ರೆ ಸಂಘದ ನಿರ್ದೇಶಕ ಟಿ.ಎಂ.ಎ. ಕರೀಂ ಸ್ವಾಗತಿಸಿದರು. ಇದೇ ವೇಳೆ ಆನಂದ ಭಟ್ ಮಲ್ಲಾವರ ಕೊಡುಗೆಯಾಗಿ ನೀಡಿದ ಅಕ್ವೇರಿಯಂನ್ನು ಲೋಕಾರ್ಪಣೆಗೊಳಿಸಲಾಯಿತು.