ಮೂವರು ಯುವಕರಿಗೆ ಹಲ್ಲೆ : 6 ಮಂದಿ ವಿರುದ್ಧ ಕೇಸು
ಉಪ್ಪಳ: ಯುವಕರನ್ನು ತಡೆದು ನಿಲ್ಲಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಉಪ್ಪಳ ಹಿದಾಯತ್ ನಗರ ಕಸಾಯಿಗಲ್ಲಿಯ ಮುಹಮ್ಮದ್ ಶಕೀರ್ (20), ಉಪ್ಪಳದ ಶೇಖ್ ಮುಹಮ್ಮದ್ ನಿಹಾಲ್ (18), ಪತ್ವಾಡಿ ರೋಡ್ ಮಜಲ್‌ನ ಮುಹಮ್ಮದ್ ರಿಸ್ವಾನ್ (18) ಎಂಬಿವರಿಗೆ ತಂಡ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಇವರು ನೀಡಿದ ದೂರಿನಂತೆ ಉಪ್ಪಳ ನಿವಾಸಿಗಳಾದ ಮಕ್ಳು, ಮುರ್ಶಿದ್, ಸಿಲಾಲ್, ಫೈಸಲ್, ಸಫ್ವಾನ್, ಅಶ್ಪಾಕ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ.
ಕಳೆದ ಬುಧವಾರ ರಾತ್ರಿ 8.30ರ ವೇಳೆ ಉಪ್ಪಳ ಬಸ್ ನಿಲ್ದಾಣ ಸಮೀಪ ತಂಡ ಹಲ್ಲೆಗೈದು ಅಸಭ್ಯವಾಗಿ ನಿಂದಿಸಿರುವುದಾಗಿ ಗಾಯಗೊಂಡ ಯುವಕರು ತಿಳಿಸಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.