ಮೇಳದಲ್ಲಿ 909 ಭೂ ಹಕ್ಕುಪತ್ರ ಸಚಿವರಿಂದ ವಿತರಣೆ

ಕಾಸರಗೋಡು: ಜಿಲ್ಲಾಮಟ್ಟದ ಭೂಮಿ ಹಕ್ಕು ಪತ್ರ ವಿತರಣೆ ಮೇಳದಲ್ಲಿ 909 ಹಕ್ಕು ಪತ್ರಗಳನ್ನು ವಿತರಿಸಲಾಯಿತು. 683 ಲ್ಯಾಂಡ್ ಟ್ರಿಬ್ಯೂನಲ್ ಪಟ್ಟಾ, 20 ದೇವಸ್ವಂ ಪಟ್ಟಾ, 157 ಎಲ್‌ಎ ಹಕ್ಕುಪತ್ರ, 36 ಅರಣ್ಯ ಭೂಮಿ ಹಕ್ಕುಪತ್ರ, 10 ಬಂಜರುಭೂಮಿ ಹಕ್ಕು ಪತ್ರ ಎಂಬೀ ರೀತಿಯಲ್ಲಿ ವಿತರಿಸಲಾಗಿದೆ. ಮಂಜೇಶ್ವರ ತಾಲೂಕಿನಲ್ಲಿ ೫೦, ಕಾಸರಗೋಡು ತಾಲೂಕಿನಲ್ಲಿ 41, ಹೊಸದುರ್ಗ ತಾಲೂಕಿನಲ್ಲಿ 28, ವೆಳ್ಳೇರಿಕುಂಡ್ ತಾಲೂಕಿನಲ್ಲಿ 74 ಭೂಮಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ.

ಶಿರಿಬಾಗಿಲು ಕೊರಗ ನಗರದಲ್ಲಿ 22 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಯಿತು. 3 ವರ್ಷಕ್ಕೂ ಹೆಚ್ಚು ಕಾಲ ವಾಸಿಸುತ್ತಿದ್ದ ಭೂಮಿಗೆ ಮೇಳದಲ್ಲಿ ಹಕ್ಕುಪತ್ರ ನೀಡಲಾಗಿದೆ. ಕುಂಬ್ಡಾಜೆಯ ಭಿನ್ನಸಾಮಾರ್ಥ್ಯದ ಲಾಟರಿ ಏಜೆಂಟ್ ರಾಜೇಶ್‌ನಿಗೂ ಸಚಿವರು ಭೂಮಿಪತ್ರ ಹಕ್ಕು ವಿತರಿಸಿದರು. ರಾಜೇಶ್‌ರ ಎರಡು ಕಾಲುಗಳು ಶಕ್ತಿಹೀನಗೊಂಡ ಹಿನ್ನೆಲೆಯಲ್ಲಿ ಸಚಿವರು ವೇದಿಕೆಯಿಂದ ಇಳಿದು ಬಂದು ರಾಜೇಶ್‌ರಿಗೆ ಹಕ್ಕುಪತ್ರ ನೀಡಿದರು. ಕುಂಬ್ಡಾಜೆ ವಿಲ್ಲೇಜ್‌ನಲ್ಲಿ ಇವರಿಗೆ ಸ್ಥಳ ಲಭಿಸಿದೆ. ಪ್ರಸ್ತುತ ಇವರು ಕೂಡ್ಲುವಿನಲ್ಲಿ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸವಾಗಿದ್ದು, ಸ್ವಂತ ಹೆಸರಲ್ಲಿ ಒಂದು ತುಂಡು ಭೂಮಿ ಕನಸಾದ ಸಂತೋಷದಲ್ಲಿದ್ದಾರೆ.

You cannot copy contents of this page