ಮೊಗೇರ ಸಮಾಜದಿಂದ ಮಧೂರು ಕ್ಷೇತ್ರಕ್ಕೆ ಹೊರೆಕಾಣಿಕೆ: ಅಭಿನಂದನೆ 20ರಂದು


ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆಯ ಪ್ರಯುಕ್ತ ಸಮಸ್ತ ಮೊಗೇರ ಸಮಾಜದ ವತಿಯಿಂದ ಹೊರೆಕಾಣಿಕೆ ಸಮರ್ಪಣೆಯನ್ನು ಯಶಸ್ವಿಗೊಳಿಸಿದ ಮೊಗೇರ ಸಮಾಜ ಬಾಂಧವರಿಗೆ ಅಭಿನಂದನಾ ಸಮಾರಂಭ ಈ ತಿಂಗಳ 20ರಂದು ಬೆಳಿಗ್ಗೆ 9.30ಕ್ಕೆ ಉಳಿಯತ್ತಡ್ಕದ ಅಟಲ್ಜಿ ಸಭಾಂಗಣದಲ್ಲಿ ನಡೆಯಲಿದೆ. ಮಲಬಾರ್ ದೇವಸ್ವಂ ಬೋರ್ಡ್ ಸದಸ್ಯ ಎ.ಕೆ. ಶಂಕರ ಉದ್ಘಾಟಿಸುವರು. ಕವಿ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಲಕ್ಷ್ಮಣ ಪೆರಿಯಡ್ಕ ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ಬೇಡು ಎ.ಪಿ. ಕಲ್ಲಕಟ್ಟ ಲೆಕ್ಕಪತ್ರ ಮಂಡಿಸುವರು. ಹರೀಶ್ ಪೆರ್ನಡ್ಕ, ಭಾಸ್ಕರ ಕಾಳ್ಯಂಗಾಡು, ಐತ್ತಪ್ಪ ನೆಲ್ಲಿಕುಂಜೆ ಶುಭ ಕೋರುವರು. ರಮೇಶ್ ಬನ್ನೂರು, ಮನೋಜ್ ಮಂಜೇಶ್ವರ, ಶಶಿಧರ ಎದುರ್ತೋಡು ಉಪಸ್ಥಿತರಿರುವರು. ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ದುಡಿನಲಿಕೆ, ಚೆಂಡೆಮೇಳ, ಕುಣಿತ ಭಜನೆ, ಬ್ಯಾಂಡ್ಸೆಟ್ ಇತ್ಯಾದಿ ತಂಡಗಳನ್ನು ಅಭಿನಂದಿಸಲಾಗುವುದು.

RELATED NEWS

You cannot copy contents of this page