ಯುವಕನಿಗೆ ಹಲ್ಲೆ ನಡೆಸಿ ರೈಲಿಗೆ ಕಲ್ಲೆಸೆದ ಪ್ರಕರಣದ ಆರೋಪಿ ಸೆರೆ

ಕಾಸರಗೋಡು: ಮಂಗಳೂರು-ತಿರುವನಂತಪುರ ಮಧ್ಯೆ ಸಂಚರಿಸುವ ಮಲಬಾರ್ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಯುವಕನಿಗೆ ಹಲ್ಲೆ ನಡೆಸಿ ಬಳಿಕ ರೈಲಿಗೆ ಕಲ್ಲೆಸೆದ ಪ್ರಕರಣದ ಆರೋ ಪಿಯನ್ನು ಘಟನೆ ನಡೆದ ತಾಸುಗಳೊಳಗೆ  ಕಾಸರಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.ಚಟ್ಟಂಚಾಲ್‌ಗೆ ಸಮೀಪದ ತೆಕ್ಕಿಲ್ ಮೈಲಾಟಿ ನಿವಾಸಿ ಎಸ್. ಅನಿಲ್ ಕುಮಾರ್ (41) ಬಂಧಿತ ಆರೋಪಿ. ಮಲಪ್ಪುರಂ ವಳಯಂ ಕೋಡ್ ನಿವಾಸಿ ಕೆ. ರಿಜಾಸ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ರೈಲಿನಲ್ಲಿ ಮೊನ್ನೆ ರಾತ್ರಿ ನಾನು ಮತ್ತು ಸ್ನೇಹಿತೆಯರಾದ ಇಬ್ಬರು ಯುವತಿ ಪ್ರಯಾಣಿಸುತ್ತಿದ್ದ ವೇಳೆ  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಅನಿಲ್ ಕುಮಾರ್  ಯುವತಿಯರನ್ನು ಕೆಟ್ಟ ದೃಷ್ಟಿಯಿಂ ದ ನೋಡಿದನೆಂದೂ ಅದನ್ನು ನಾನು  ಪ್ರಶ್ನಿಸಿದಾಗ ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿದದೆನೆಂದೂ ನಂತರ  ಬೇಕಲ್ ಫೋರ್ಟ್ ರೈಲು ನಿಲ್ದಾಣಕ್ಕೆ ತಲುಪಿದಾಗ ಆರೋಪಿ ಕೆಳಕ್ಕಿಳಿದು ತಾನು ಕುಳಿದುಕೊಂಡಿದ್ದ ಆಸನದತ್ತ ಕಲ್ಲು ತೂರಾಟ ನಡೆಸಿದನೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಿಜಾಸ್ ಆರೋಪಿಸಿದ್ದಾರೆ. ರೈಲಿಗೆ ಕಲ್ಲು ತೂರಾಟ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ತಕ್ಷಣ ವ್ಯಾಪಕ ವಾಗಿ  ಪ್ರಚಾರ ವಾಗಿತ್ತು.  ಅದರ ದೃಶ್ಯಗಳು ಹಾಗೂ ಆ ಬಗ್ಗೆ ಲಭಿಸಿದ ದೂರಿನ ಆಧಾರದಲ್ಲಿ ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ  ಎಸ್.ಐ ರಜಿ ಕುಮಾರ್ ನೇತೃತ್ವದ ಪೊಲೀಸರು ತಕ್ಷಣ ನಡೆಸಿದ ಕಾರ್ಯಾಚರಣೆ ಯಲ್ಲಿ  ಘಟನೆ ನಡೆದ ಕೆಲವೇ ತಾಸುಗಳೊಳಗೆ ಪೊಯಿನಾ ಚಿಯಿಂದ ಆರೋಪಿಯನ್ನು  ಪೊಲೀ ಸರು ಬಂಧಿಸಿದರು. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಸ್‌ಐ ಪ್ರಕಾಶನ್, ಎಸ್‌ಸಿಪಿಒ ಸುನೀಶ್, ಸಿಪಿಒ ಜ್ಯೋತಿಷ್, ಜೋಸ್ ಎಂಬಿವರು ಒಳಗೊಂಡಿದ್ದರು.

You cannot copy contents of this page