ಯುವತಿ ನೇಣು ಬಿಗಿದು ಆತ್ಮಹತ್ಯೆ
ಕಲ್ಲಿಕೋಟೆ: ಹೋಟೆಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾ ಗಿದೆ. ಕಲ್ಲಿಕೋಟೆ ಪಯ್ಯೋಳಿ ಬೀಚ್ ಕುರುಂಬಾ ಭಗವತಿ ಕ್ಷೇತ್ರ ಸಮೀಪದ ಮನೋಜ್‌ರ ಪುತ್ರಿ ಮಂಜಿಮ (19) ಮೃತಪಟ್ಟ ಯುವತಿ. ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಕೆಲಸಕ್ಕೆ ತೆರಳಿದ್ದ ಮನೋಜ್ ಮಧ್ಯಾಹ್ನ 11.30ರ ವೇಳೆ ಮನೆಗೆ ಹಿಂತಿರುಗಿದಾಗ ಮಂಜಿಮಳನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. 3 ತಿಂಗಳ ಹೊಟೇಲ್ ಮೆನೇಜ್‌ಮೆಂಟ್ ಕೋರ್ಸ್ ಗೆ ಸೇರಿ ಕಣ್ಣೂರಿನಲ್ಲಿ ಈಕೆ ಕಲಿಯುತ್ತಿ ದ್ದಳು. 1 ವಾರದ ರಜೆಯಲ್ಲಿ ಮನೆಗೆ ತಲುಪಿದ್ದಳು.