ಯುವತಿಗೆ ದೌರ್ಜನ್ಯಗೈದು ಗರ್ಭಿಣಿಯಾಗಿಸಿದ ಪ್ರಕರಣ :ಬಂಧಿತ ನಟ ಶಿಯಾಸ್ ಕರೀಂನನ್ನು ಇಂದು ಚಂದೇರಕ್ಕೆ ತಲುಪಿಸಿ ತನಿಖೆ

ಕಾಸರಗೋಡು: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ಯುವತಿಗೆ ಕಿರುಕುಳ ನೀಡಿರುವುದಲ್ಲದೆ ಆಕೆಯಿಂದ ೧೧ ಲಕ್ಷರೂಪಾಯಿ ಪಡೆದು  ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ನಟ ಶಿಯಾಸ್ ಕರೀಂ (೩೪)ನನ್ನು ಇಂದು ರಾತ್ರಿಯೊಳಗೆ ಚಂದೇರ ಪೊಲೀಸ್ ಠಾಣೆಗೆ ತಲುಪಿಸಲಾಗುವುದು. ಬಳಿಕ ನಾಳೆ ಹೊಸದುರ್ಗ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೩೨ರ ಹರೆಯದ ಯುವತಿ ನೀಡಿದ ದೂರಿನಂತೆ ಶಿಯಾಸ್ ಕರೀಂ ವಿರುದ್ಧ ಪೊಲೀಸ್ ಕೇಸು ದಾಖಲಿಸಿಕೊಂಡಿದ್ದರು. ಶಿಯಾಸ್  ಕರೀಂನ  ಜಿಮ್ನೇಶಿಯಂ ಸಂಸ್ಥೆಯಲ್ಲಿ ತರಬೇತುದಾರೆಯಾಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ಭರವಸೆಯೊಡ್ಡಿ ಆಕೆಗೆ ವಂಚಿಸಿರುವುದಾಗಿ ದೂರಲಾಗಿದೆ. ೨೦೨೧ರಿಂದ ೨೦೨೩ ಮಾಚ್ ವರೆಗಿನ ಕಾಲಾವಧಿಯಲ್ಲಿ ಎರ್ನಾಕುಳಂ, ಕಡವಂದ್ರ, ಮೂನ್ನಾರ್ ಎಂಬಿಡೆಗಳ ಹೋಟೆಲ್‌ಗಳಲ್ಲಿ ಯುವತಿಗೆ ಶಿಯಾಸ್ ಕರೀಂ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಅಲ್ಲದೆ ಯುವತಿಯಿಂದ ೧೧ ಲಕ್ಷ ರೂಪಾಯಿ ಪಡೆದುಕೊಂಡಿದ್ದನೆನ್ನಲಾಗಿದೆ.

ಯುವತಿ ಗರ್ಭಿಣಿಯಾದಾಗ ಒತ್ತಾಯದಿಂದ ಎರಡು ಬಾರಿ  ಗರ್ಭ ಛಿದ್ರ  ನಡೆಸಿದ್ದು, ಅಲ್ಲದೆ ಚೆರ್ವತ್ತೂರಿನ ಹೋಟೆಲ್ ಕೊಠಡಿಯಲ್ಲಿ ಯುವತಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಾನಭಂಗ, ವಿಶ್ವಾಸವಂಚನೆ, ಹಣ ವಂಚನೆ ಎಂಬೀ ಕಾಯ್ದೆಗಳ ಪ್ರಕಾರ ಚಂದೇರ ಪೊಲೀಸರು ಶಿಯಾಸ್ ಕರೀಂ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದರು. ಇದೇ ವೇಳೆ ವಿದೇಶಕ್ಕೆ ತೆರಳಿದ್ದ ಈತನ ವಿರುದ್ಧ ಪೊಲೀಸರು ಲುಕೌಟ್  ನೋಟೀಸು ಹೊರಡಿಸಿದ್ದರು. ನಿನ್ನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಿಯಾಸ್ ಕರೀಂನನ್ನು ಕಸ್ಟಮ್ಸ್   ಸೆರೆಹಿಡಿದಿತ್ತು. ಇಂದು ರಾತ್ರಿಯೊಳಗೆ ಚಂದೇರಕ್ಕೆ ತಲುಪಿಸುವ ಈತನನ್ನು ನ್ಯಾಯಾ ಲಯದಲ್ಲಿ ಹಾಜರುಪಡಿಸ ಲಾಗು ವುದು. ಅಲ್ಲದೆ  ಯುವತಿಗೆ ದೌರ್ಜನ್ಯಗೈಯ್ಯಲಾಯಿತೆಂದು ದೂರಲಾದ ಚೆರ್ವತ್ತೂರಿನ ಹೋಟೆಲ್‌ಗೆ ಆರೋಪಿಯನ್ನು ಕರೆದೊಯ್ದು ಮಾಹಿತಿ  ಸಂಗ್ರಹಿಸುವ ಸಾಧ್ಯತೆ ಇದೆ.

You cannot copy contents of this page