ಯುವತಿಗೆ ಲೈಂಗಿಕ ದೌರ್ಜನ್ಯಗೈದು ದೃಶ್ಯಗಳನ್ನು ಸ್ನೇಹಿತನಿಗೆ ಕಳುಹಿಸಿಕೊಟ್ಟ ಪ್ರಕರಣ: ಗಲ್ಫ್‌ಗೆ ಪರಾರಿಯಾದ ಆರೋಪಿ ಬಂಧನ

ಕಾಸರಗೋಡು: ಪ್ರೀತಿಯ ನಾಟಕವಾಡಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಗಲ್ಫ್‌ಗೆ ಪರಾರಿಯಾಗಿ, ಕಿರುಕುಳ ದೃಶ್ಯಗಳನ್ನು ಯುವತಿಯ ಸ್ನೇಹಿತನಿಗೆ ಕಳುಹಿ ಸಿಕೊಟ್ಟ ಪ್ರಕರಣದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಸೆರೆ ಹಿಡಿಯಲಾಗಿದೆ. ವೆಸ್ಟ್  ಎಳೇರಿ ಬೇರ್ಕಯ ಆಲಕ್ಕೋಡ್‌ನ ಹೌಸ್‌ನ  ಜಯಕೃಷ್ಣನ್ ಎಂಬಾತನನ್ನು ವೆಳ್ಳರಿಕುಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ. ಮುಕುಂದನ್ ಹಾಗೂ ತಂಡ ಸೆರೆ ಹಿಡಿದಿದೆ. ೨೦೨೪ ಮಾರ್ಚ್ ತಿಂಗಳಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಬಳಿಕ ಜಯಕೃಷ್ಣನ್ ಗಲ್ಫ್‌ಗೆ ಪರಾರಿಯಾಗಿದ್ದನು. ಬಳಿಕ ಅಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಐಡಿ ಸೃಷ್ಟಿಸಿ ಲೈಂಗಿಕ ಕಿರುಕುಳದ ದೃಶ್ಯಗಳನ್ನು ಯುವತಿಯ ಸ್ನೇಹಿತನಿಗೆ ಕಳುಹಿಸಿಕೊಟ್ಟಿರುವುದಾಗಿ ದೂರಲಾಗಿದೆ.

ಇದರಂತೆ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಲುಕೌಟ್ ನೋಟೀಸ್ ಹೊರಡಿಸಿದ್ದರು. ಈ ಮಧ್ಯೆ ಮೊನ್ನೆ ಸಂಜೆ ಗಲ್ಫ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಜಯಕೃಷ್ಣನ್‌ನನ್ನು ಅಲ್ಲಿ ತಡೆದು ನಿಲ್ಲಿಸಿದ ವಿಮಾನ ನಿಲ್ದಾಣ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.

You cannot copy contents of this page