ರವೀಂದ್ರನಾಥ ಠಾಗೋರ್ ಸಂಸ್ಮರಣೆ: ಪಾರ್ಲಿಮೆಂಟ್‌ನಲ್ಲಿ ಮಾತನಾಡಲು ಕೇರಳ ಕೇಂದ್ರ ವಿ.ವಿ.ಯ ವಿದ್ಯಾರ್ಥಿನಿಗೆ ಅವಕಾಶ

ಕಾಸರಗೋಡು: ರವೀಂದ್ರನಾಥ ಠಾಗೋರ್ ಸಂಸ್ಮರಣೆ ಪಾರ್ಲಿಮೆಂಟ್ ನಲ್ಲಿ ಈ ತಿಂಗಳ ೯ರಂದು ನಡೆಯಲಿದ್ದು, ಈ ವೇಳೆ ಸಂಸ್ಮರಣಾ ಭಾಷಣ ಮಾಡಲು ಕೇರಳ ಕೇಂದ್ರ ವಿವಿಯ ವಿದ್ಯಾರ್ಥಿನಿ ಹಾಗೂ ಎಕನಾಮಿಕ್ಸ್ ವಿಭಾಗ ಸ್ನಾತಕೋತ್ತರ ವಿದ್ಯಾರ್ಥಿನಿಯಾದ ಪಿ. ಅನುಶ್ರೀಗೆ ಅವಕಾಶ ಲಭಿಸಿದೆ. ಪಾರ್ಲಿಮೆಂಟ್‌ನ ಸೆಂಟ್ರಲ್ ಸಭಾಂ ಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಇವರಿಗೆ ಅವಕಾಶ ಲಭಿಸಿದೆ. ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳ 12 ಮಂದಿಗೆ ಈ ಅವಕಾಶ ಲಭಿಸಿದ್ದು, ಇದರಲ್ಲಿ ಕೇರಳದಿಂದ ಅನುಶ್ರೀ ಸೇರಿದ್ದಾರೆ.ಕರ್ನಾಟಕ, ಝಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಝೋರಾಂ, ನಾಗಾಲ್ಯಾಂಡ್, ದೆಹಲಿ, ಜಮ್ಮು-ಕಾಶ್ಮೀರ ಎಂಬೆಡೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರಿಗೆ ಎರಡು ನಿಮಿಷದಂತೆ ಮಾತನಾಡಲು ಸಮಯಾವಕಾಶ ಲಭಿಸುವುದು. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಇವರನ್ನು ಆಯ್ಕೆ ಮಾಡಲಾಗಿದೆ. ಕಲ್ಲಿಕೋಟೆ ವಡಗರ ನಿವಾಸಿಯಾಗಿದ್ದಾರೆ ಅನುಶ್ರೀ.

RELATED NEWS

You cannot copy contents of this page