ರಾಜ್ಯದ 2,77,49,159 ಮತದಾರರಲ್ಲಿ 1,95,22,259 ಮಂದಿ ಮತ ಚಲಾವಣೆ
ಕಾಸರಗೋಡು: ರಾಜ್ಯದಲ್ಲಿ ಒಟ್ಟು 2,77,49,159 ಮತದಾರರಿದ್ದು, ಅದರಲ್ಲಿ ನಿನ್ನೆ 1,95,22,259 ಮಂದಿ ಮಾತ್ರವೇ ಮತ ಚಲಾಯಿಸಿದ್ದಾರೆ.
ಮತ ಚಲಾಯಿಸಿದವರಲ್ಲಿ 93,59,093 (ಶೇ. 69.76) ಗಂಡಸರು, 1,01,63,023 (ಶೇ. 70.90) ಮಹಿಳೆಯರು ಮತ್ತು 143 (ಶೇ. 38.96) ತೃತೀಯ ಲಿಂಗಿಗಳು ಒಳಗೊಂಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಮಂಡಲದಲ್ಲಿ ಈ ಬಾರಿ 75.94 ಶೇಕಡಾಕ್ಕೂ ಅಧಿಕ ಮಂದಿ ಮತದಾನ ಮಾಡಿದ್ದಾರೆ. ಇದೇ ವೇಳೆ ಕಳೆದ ಬಾರಿ ಪೋಲಿಂಗ್ 80.57 ಶೇಕಡಾವಾಗಿತ್ತು. 4 ಶೇಕಡಾಕ್ಕೂ ಅಧಿಕ ಮಂದಿಯ ಮತದಾನದ ಕೊರತೆ ಉಂಟಾಗಿದೆ. ಒಟ್ಟು 14 ಲಕ್ಷಕ್ಕೂ ಅಧಿಕ ಮತದಾರರಿರುವ ಕಾಸರಗೋಡು ಲೋಕಸಭಾ ಮಂಡಲದಲ್ಲಿ 1334 ಪೋಲಿಂಗ್ ಬೂತ್ಗಳನ್ನು ಸಿದ್ಧಪಡಿಸ ಲಾಗಿತ್ತು. 10 ಲಕ್ಷಕ್ಕೂ ಅಧಿಕ ಮಂದಿ ಈ ಬಾರಿ ಕಾಸರಗೋಡಿನಲ್ಲಿ ಮತದಾನ ಮಾಡಿದ್ದಾರೆ. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಈ ಬಾರಿ ಮತದಾನಗೈದಿ ದ್ದಾರೆ. ಎಡರಂಗಕ್ಕೆ ಸ್ವಾಧೀನವಿರುವ ಕಾಞಂಗಾಡ್, ತೃಕ್ಕರಿಪುರ, ಪಯ್ಯನ್ನೂರು, ಕಲ್ಯಾಶ್ಶೇರಿ ಮಂಡಲಗಳಲ್ಲಿ ಗಣನೀಯ ಮತದಾನದ ಕೊರತೆ ಉಂಟಾಗಿದೆ. ಯುಡಿಎಫ್ಗೆ ಸ್ವಾಧೀನವಿರುವ ಕಾಸರಗೋಡು, ಮಂಜೇಶ್ವರದಲ್ಲಿಯೂ ಈ ಬಾರಿ ಮತದಾನ ಕಡಿಮೆಯಾಗಿದೆ.