ರಾಜ್ಯದಲ್ಲಿ ಬೇಸಿಗೆ ಮಳೆ ಇಂದಿನಿಂದ ಸಾಧ್ಯತೆ

ಕಾಸರಗೋಡು: ರಾಜ್ಯದಲ್ಲಿ ಇಂದು ಅಥವಾ ನಾಳೆಯಿಂದ ಸಾಧಾ ರಣವಾಗಿ ಬೇಸಿಗೆ ಮಳೆ ಸುರಿಯ ಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ. ಈ ತಿಂಗಳ ೨೧ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗ ಳಲ್ಲಿ ಮಳೆ ಸುರಿಯಲಿದೆ ಯೆಂದು ತಿಳಿಸಲಾಗಿದೆ. ಇದರಿಂದ ಕಲ್ಲಿಕೋಟೆ, ವಯನಾಡು, ಕಣ್ಣೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾ ಗಿದೆ. ಬೇಸಿಗೆಯ ಬೇಗೆಯಿಂದ ಭೂಮಿ ಈಗಾಗಲೇ  ಬಿಸಿಯೇರಿದ್ದು, ಉಷ್ಣತೆ ಸಹಿಸಲಾಗದೆ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ.  ಬೇಸಿಗೆ ಮಳೆ ಸುರಿದರೆ ಉಷ್ಣತೆಯಿಂದ ಪಾರಾಗಬ ಹುದೆಂದು ನಿರೀಕ್ಷಿಸಲಾಗಿದೆ.

RELATED NEWS

You cannot copy contents of this page