ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣದಲ್ಲಿ ನಾಲ್ಕು ಪಟ್ಟು ಏರಿಕೆ

ಕಾಸರಗೋಡು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ರಾಜ್ಯ ಆರ್ಥಿಕ ಅವಲೋಕನಾ ಸಭೆಯ ವರದಿಯಲ್ಲಿ ಸೂಚಿಸಲಾಗಿದೆ. 2023-24ನೇ ವರ್ಷದಲ್ಲಿ ಸೈಬರ್ ಅಪರಾಧ ಕೃತ್ಯಗಳಿಗೆ ಸಂಬAಧಿಸಿ ರಾಜ್ಯದಲ್ಲಿ 3,38,2 ಪ್ರಕರಣಗಳು ರಾಜ್ಯದ ಸೈಬರ್ ಸೆಲ್ನಲ್ಲಿ ದಾಖಲು ಗೊಂಡಿವೆ. ಈ ಹಿಂದಿನ ವರ್ಷಗಳೊಂದಿಗೆ ಇದನ್ನು ಹೋಲಿಸಿ ನೋಡಿದಲ್ಲಿ ಇದು ನಾಲ್ಕು ಪಟ್ಟು ಹೆಚ್ಚಾಗಿದೆ.
2023-24ನೇ ವರ್ಷದಲ್ಲಿ ಆನ್ಲೈನ್ ಮೂಲಕ ಹಣ ವಂಚನೆಗೆ ಸಂಬAಧಿಸಿ ಮಾತ್ರವಾಗಿ 2,772 ಪ್ರಕರಣಗಳು ರಾಜ್ಯದಲ್ಲಿ ದಾಖಲುಗೊಂಡಿದೆ. ಆ ಮೂಲಕ ಇಂತಹ ಸೈಬರ್ ವಂಚನಾ ಜಾಲದವರು ಕೋಟಿಗಟ್ಟಲೆ ರೂಪಾಯಿ ಎಗರಿಸಿದ್ದಾರೆ. 72 ಮಂದಿಯ ಬ್ಯಾಂಕ್ ಖಾತೆಗಳು ಹಾಗೂ ಇ-ಮೇಲ್ನ ಹ್ಯಾಕ್ ಗೈಯ್ಯಲಾಗಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗ, ಮಕ್ಕಳ ಅಶ್ಲೀಲ ಚಿತ್ರ ಮತ್ತು ವೀಡಿಯೋ ರವಾನಿಸುವಿಕೆ, ಸ್ಮಾರ್ಟ್ ಫೋನ್ಗಳ ಮೂಲಕ ಇತರ ಅಪರಾಧ ಕೃತ್ಯ ನಡೆಸುವಿಕೆ, ಇತ್ಯಾದಿಗಳ ಇಂತಹ ಅಪರಾಧ ಪ್ರಕರಣಗಳು ಇವುಗಳಲ್ಲಿ ಹೆಚ್ಚಿನವುಗಳಾಗಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

You cannot copy contents of this page