ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್ ಜಿಲ್ಲೆಯಲ್ಲಿ ಶೀಘ್ರ ಪೂರ್ತಿ: ರಾಜ್ಯಕ್ಕೆ ಹೆಮ್ಮೆಯ ನಿಮಿಷ- ಸಚಿವ ಪಿ.ಎ. ಮೊಹಮ್ಮದ್ ರಿಯಾಸ್

ಕಾಸರಗೋಡು: ತಲಪಾಡಿಯಿಂದ ಚೆಂಗಳವರೆಗಿನ 39 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್‌ನ ಕಾಮಗಾರಿ ಪೂರ್ತಿಯಾಗುತ್ತಿದ್ದು, ಇಲ್ಲಿಗೆ ಕೇರಳ ಲೋಕೋಪಯೋಗಿ ಇಲಾಖೆ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಸಂದರ್ಶಿಸಿದರು. ತಲಪಾಡಿಯಿಂದ ಚೆಂಗಳವರೆಗಿನ ಕಾಮಗಾರಿ ಪೂರ್ತಿಯಾಗುತ್ತಿದ್ದು ಇದು ರಾಜ್ಯಕ್ಕೆ ಹೆಮ್ಮೆಯ ನಿಮಿಷವೆಂದು ಸಚಿವರು ಅಭಿಪ್ರಾಯಪಟ್ಟರು.

27 ಮೀಟರ್ ಅದಲದಲ್ಲಿ ದಕ್ಷಿಣ ಭಾರತದಲ್ಲೇ ಬಾಕ್ಸ್‌ಗಾರ್ಡರ್ ಮಾದರಿಯಲ್ಲಿ ನಿರ್ಮಿಸಿದ ಮೊದಲ ಏಕ ಸ್ತಂಭ ಮೇಲ್ಸೇತುವೆಯನ್ನು ಸಚಿವರು ಸಂದರ್ಶಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಸರಗೋಡಿನ ಪ್ರಗತಿಗೆ ಹೊಸ ದಾರಿಯಾಗಲಿದೆ ಎಂದು ನುಡಿದ ಅವರು ಕೇರಳದ ಉತ್ತರ ಭಾಗದ ತುತ್ತ ತುದಿಯಲ್ಲಿ ಮೊದಲ ರೀಚ್ ಪ್ರಥಮ ವಾಗಿ ಪೂರ್ತಿಗೊಳ್ಳುತ್ತಿದೆ ಎಂಬುದು ಪ್ರತ್ಯೇಕತೆಯಾಗಿದೆ ಎಂದವರು ನುಡಿದರು.

 2 ಮೇಲ್ಸೇತುವೆಗಳು, 4 ದೊಡ್ಡ ಸೇತುವೆಗಳು, 4 ಸಣ್ಣ ಸೇತುವೆಗಳು, 21 ಅಂಡರ್‌ಪಾಸ್‌ಗಳು, 10 ಫೂಟ್ ಓವರ್ ಬ್ರಿಡ್ಜ್‌ಗಳು, 2 ಓವರ್ ಪಾಸ್‌ಗಳ ನಿರ್ಮಾಣ ಪೂರ್ತಿಗೊಂಡಿದೆ. ಇದರಲ್ಲಿ ಬಹಳ ಪ್ರಧಾನವಾಗಿರುವುದು ಕಾಸರಗೋಡು ನಗರದ 1.12 ಕಿಲೋ ಮೀಟರ್ ಉದ್ದದ ಏಕ ಸ್ತಂಭ ಮೇಲ್ಸೇತುವೆಯಾ ಗಿದೆ. ದಕ್ಷಿಣ ಭಾರತದಲ್ಲೇ ಇದು ಈ ರೀತಿಯಲ್ಲಿ ನಿರ್ಮಿಸಿದ ಮೊದಲ ಮೇಲ್ಸೇತುವೆಯಾಗಿದೆ.  ದೇಶದ ಇತಿಹಾಸದಲ್ಲೇ ಪ್ರಥಮವಾಗಿ ರಾಜ್ಯ ಸರಕಾರ 5800 ಕೋಟಿ ರೂ. ವೆಚ್ಚ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಸಚಿವರು ತಿಳಿಸಿದರು. ಶಾಸಕ ರಾದ ಎಂ. ರಾಜಗೋಪಾಲನ್, ಸಿ.ಎಚ್. ಕುಂಞಂಬು, ಎನ್.ಎಚ್.ಎ.ಐ ಡೆಪ್ಯುಟಿ ಮೆನೇಜರ್ ಜಸ್ಪ್ರೀತ್, ಎಸ್.ಕೆ. ಸಿನ್ಹಾ, ಯುಎಲ್‌ಸಿಸಿ ನಿರ್ದೇಶಕರಾದ ಪಿ. ಪ್ರಕಾಶನ್, ಕೆ.ಟಿ. ರಾಜನ್, ಪಿ.ಕೆ. ಶ್ರೀಜಿತ್, ಪ್ರೊಜೆಕ್ಟ್ ಮೆನೇಜರ್ ಎಂ. ನಾರಾಯಣನ್ ಸಚಿವರ ಜೊತೆಗಿದ್ದರು.

You cannot copy contents of this page