ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿದೀಪ ಸ್ಥಾಪಿಸುವುದರಲ್ಲಿ ತಾರತಮ್ಯ- ಕಾಂಗ್ರೆಸ್ ಆರೋಪ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಕಲ್ಲಂಗೈಯಿಂದ ಸಿಪಿಸಿಆರ್‌ಐವರೆಗೆ ಬೀದಿ ದೀಪ ಸ್ಥಾಪಿಸುವುದರಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆಂದು ಕಾಂಗ್ರೆಸ್ ಮಂಡಲ ಸಮಿತಿ ಆರೋಪಿಸಿದೆ. ಈ ಭಾಗದಲ್ಲಿ ನಿರ್ಮಾಣ ಚಟುವಟಿಕೆ 95 ಶೇಕಡಾ ಪೂರ್ತಿಯಾದಾಗ ಕಲ್ಲಂಗೈಯಿಂದ ಕುಳಂಗರ ವರೆಗೆ ಬೀದಿ ದೀಪ ಸ್ಥಾಪಿಸಿಲ್ಲವೆಂದು, ಇದು ತಾರತಮ್ಯ ನೀತಿಯಾಗಿದೆ ಎಂದು ಕಾಂಗ್ರೆಸ್ ಸಮಿತಿ ಆಪಾದಿಸಿದೆ. ಈ ಬಗ್ಗೆ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಜನವಾಸ ಕೇಂದ್ರವಲ್ಲದ ಪ್ರದೇಶವಾದ ಕಾರಣ ಬೀದಿ ದೀಪ ಸ್ಥಾಪಿಸದಿರುವುದು ಎಂದು ಉತ್ತರ ಲಭಿಸಿರುವುದಾಗಿ ಕಾಂಗ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಧ್ಯೆ ಪ್ರವೇಶಿಸ ಬೇಕೆಂದು ಸಂಸದರಲ್ಲಿ, ಹೈವೇ ಪ್ರಾಧಿಕಾರದಲ್ಲಿ ಕಾಂಗ್ರೆಸ್ ಮಂಡಲ ಸಮಿತಿ ಆಗ್ರಹಿಸಿದೆ. ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗು ವುದಾಗಿ ಕಾಂಗ್ರೆಸ್ ಎಚ್ಚರಿಸಿದೆ. ಪದಾಧಿಕಾರಿಗಳಾದ ವೇಲಾಯುಧನ್, ನಾರಾಯಣನ್ ನಾಯರ್, ಹನೀಫ್, ಅಹಮ್ಮದ್ ಚೌಕಿ ಎಂಬಿವರು ಹೇಳಿಕೆ ನೀಡಿದ್ದಾರೆ.

You cannot copy contents of this page