ರೈಲು ಢಿಕ್ಕಿ ಹೊಡೆದು ಹೊರಕ್ಕೆಸೆಯಲ್ಪಟ್ಟ ಯುವಕರಿಬ್ಬರಿಗೆ ಗಂಭೀರ
ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಿಂದ ಹೊರಕ್ಕೆಸೆಯಲ್ಪಟ್ಟು ಹಾಗೂ ರೈಲು ಢಿಕ್ಕಿ ಹೊಡೆದು ಯುವಕರಿಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಹೊಸದುರ್ಗ ಮಾವುಂಗಾಲ್ ಪುದಿಯಕಂಡದ ಲಕ್ಷಂವೀಡಿನ ಶಿಜು (44) ಎಂಬವರು ಹೊಸದುರ್ಗದಲ್ಲಿ ಮೊನ್ನೆ ರಾತ್ರಿ ಸಂಚರಿಸುತ್ತಿದ್ದ ರೈಲುಗಾಡಿಯಿಂದ ಹೊರಕ್ಕೆಸೆ ಯಲ್ಪಟ್ಟು ಗಂಭೀರ ಗಾಯಗೊಂ ಡಿದ್ದಾರೆ. ಅವರನ್ನು ನಂತರ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರ ಹೊರತಾಗಿ ಹೊಸದುರ್ಗ ಮಾಣಿಕೋತ್ ರೈಲು ಹಳಿ ಸಮೀಪ ಪಶ್ಚಿಮ ಬಂಗಾಲ ನಿವಾಸಿ ಸೋನು ಮುಂಡೆ (26) ಎಂಬವರು ರೈಲು ಗಾಡಿಯಿಂದ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿ ದ್ದಾರೆ. ಹೊಸದುರ್ಗ ಪೊಲೀಸರು ಮತ್ತು ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು.