ಲಾಟರಿ ಟಿಕೆಟ್ ಬೆಲೆ ಹೆಚ್ಚಳ ಹಿಂತೆಗೆಯಬೇಕು : ಜಿಲ್ಲಾ ಲಾಟರಿ ಏಜೆಂಟ್ ಆಂಡ್ ಸೆಲ್ಲರ್ಸ್ ಸಂಘ್ ಆಗ್ರಹ

ಕಾಸರಗೋಡು:  ಲಾಟರಿ ಟಿಕೆಟ್ ಬೆಲೆ ಹೆಚ್ಚಳವನ್ನು ಹಿಂತೆಗೆಯಬೇಕೆಂದು  ಸಣ್ಣ ಮಟ್ಟಿನ ಏಜೆಂಟರಿಗಿರುವ ಅಗತ್ಯದ ಟಿಕೆಟ್ ವಿತರಣೆ ಮಾಡಬೇಕು, ಬೋ ನಸ್ 10 ಸಾವಿರ ರೂ ಆಗಿ ಹೆಚ್ಚಿಸ ಬೇಕು, ಟಿಕೆಟ್ ವಿತರಣೆಯಲ್ಲಿರುವ  ಲೋಪದೋಷಗಳನ್ನು ಪರಿಹರಿಸಬೇಕು, ಕಾರ್ಮಿಕರ ಕಮಿಶನ್ ಹೆಚ್ಚಿಸಬೇಕು ಎಂದು ಜಿಲ್ಲಾ  ಲಾಟರಿ ಏಜೆಂಟ್ ಆಂಡ್ ಸೆಲ್ಲರ್ಸ್ ಸಂಘ್ (ಬಿಎಂಎಸ್)ನ ವಾರ್ಷಿಕ ಸಮಾವೇಶದಲ್ಲಿ ರಾಜ್ಯ ಸರಕಾರದೊಂದಿಗೆ ಆಗ್ರಹಿಸಲಾಯಿತು.  ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧ್ಯಕ್ಷ ಕೆ. ಉಪೇಂದ್ರನ್ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪಿ. ದಿನೇಶ್ ಶುಭ ಕೋರಿದರು. ರಾಜ್ಯ ಸಮಿತಿ ಸದಸ್ಯ ವಿ.ಬಿ. ಸತ್ಯನಾಥ್ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಿದರು. ಅಧ್ಯಕ್ಷರಾಗಿ ಕೆ.ವಿ. ಬಾಬು, ಕಾರ್ಯದರ್ಶಿಯಾಗಿ ಬಾಬು ಮೋನ್ ಚೆಂಗಳ, ಕೋಶಾಧಿಕಾರಿಯಾಗಿ ರವೀಂದ್ರನ್ ಶಿವಾಜಿನಗರ ಎಂಬಿವರನ್ನು ಆಯ್ಕೆಮಾಡಲಾಯಿತು. ಫೆಡರೇಶನ್ ರಾಜ್ಯ ಉಪಾಧ್ಯಕ್ಷ ಕೃಷ್ಣನ್ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು. ಬಾಬುಮೋನ್ ಚೆಂಗಳ ಸ್ವಾಗತಿಸಿ, ರವೀಂದ್ರನ್ ಶಿವಾಜಿನಗರ ವಂದಿಸಿದರು.

You cannot copy contents of this page