ಲೀಗ್ ನೇತಾರರು ಆರೋಪಿಗಳಾದ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣ: ಖಮರುದ್ದೀನ್, ಪೂಕೋಯ ತಂಙಳ್ ವಿರುದ್ಧ ಮತ್ತೆ 16 ಕೇಸುಗಳು ದಾಖಲು

ಕಾಸರಗೋಡು: ಮುಸ್ಲಿಂ ಲೀಗ್  ನೇತಾರನೂ ಮಂಜೇಶ್ವರದ ಮಾಜಿ ಶಾಸಕನಾಗಿದ್ದ ಎಂ.ಸಿ. ಖಮರುದ್ದೀನ್ ಹಾಗೂ ಮಾಜಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯನಾಗಿದ್ದ ಪಿ.ಕೆ. ಪೂಕೋಯ ತಂಙಳ್ ವಿರುದ್ಧ ಮತ್ತೆ16 ಕೇಸುಗಳು ದಾಖಲಿಸಲಾಗಿದೆ. 6 ಕೇಸುಗಳನ್ನು ಚಂದೇರ ಪೊಲೀಸರು, ಐದು ಕೇಸುಗಳನ್ನು ಕಣ್ಣೂರು ಪೊಲೀಸರು ಹಾಗೂ ಐದು ಕೇಸುಗಳನ್ನು ಕ್ರೈಂಬ್ರಾಂಚ್ ನೇರವಾಗಿ ದಾಖಲಿಸಿ ಕೊಂಡಿದೆ. ಇದರೊಂದಿಗೆ ಕಾಸರಗೋ ಡಿನ ಫ್ಯಾಶನ್ ಗೋಲ್ಡ್ ಠೇವಣಿ  ವಂಚನೆಗೆ ಸಂಬಂಧಿಸಿ ದಾಖಲಿಸಿದ ಕೇಸುಗಳ ಸಂಖ್ಯೆ 184ಕ್ಕೇರಿದೆ.

ಈ ಹಿಂದೆ ದಾಖಲಿಸಿದ ಕೇಸುಗಳ ಪೈಕಿ 25ರ ಬಗ್ಗೆ  ಕ್ರೈಂ ಬ್ರಾಂಚ್ ಆರೋಪ ಪಟ್ಟಿ ಸಲ್ಲಿಸಿದೆ. ತನಿಖೆ ಪೂರ್ಣಗೊಂಡ ೫೦ರಷ್ಟು ಪ್ರಕರಣಗಳ  ಆರೋಪಪಟ್ಟಿ ಯನ್ನು ಕ್ರೈಂಬ್ರಾಂಚ್  ಮುಖ್ಯಸ್ಥರ ಅಂತಿಮ ಅನುಮತಿ ಬಳಿಕ ಸಲ್ಲಿಸ ಲಾಗುವುದು. ಈ ಮಧ್ಯೆ 16 ಕೇಸುಗಳನ್ನು ಖಮರುದ್ದೀನ್ ಸಹಿತವುಳ್ಳವರ ವಿರುದ್ಧ ದಾಖಲಿಸಲಾಗಿದೆ.

ಕಾಸರಗೋಡಿನಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾದ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣವನ್ನು ಕಣ್ಣೂರು ಕ್ರೈಂಬ್ರಾಂಚ್ ಎಸ್ಪಿಯವರ ಅಧೀನದಲ್ಲಿರುವ ಎರಡು ಘಟಕಗಳು ತನಿಖೆ ನಡೆಸುತ್ತಿವೆ.

You cannot copy contents of this page