ಲೋಕಸಭಾ ಚುನಾವಣೆಯಲ್ಲಿ ತಿರುಗೇಟು : ನಾಯಕತ್ವ ಸಭೆ ಕರೆದ ಸಿಪಿಎಂ

ತಿರುವನಂತಪುರ: ಲೋಕಸಭಾ ಚುನಾವಣೆಯಲ್ಲಿ ಉಂಟಾದ ಭಾರೀ ಸೋಲಿನ ಕುರಿತು ಚರ್ಚೆ ನಡೆಸಲು ಸಿಪಿಎಂ ನಾಯಕತ್ವ ಸಭೆ ಕರೆದಿದೆ. ಐದು ದಿನಗಳಲ್ಲಿ ವಿವಿಧ ಘಟಕಗಳ ಸಭೆ ನಡೆಯಲಿರುವುದು. ಸೆಕ್ರೆಟರಿಯೇಟ್ ಸಭೆ 7ರಂದು ನಡೆಯಲಿದೆ. ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ಪ್ರಾಥಮಿಕ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಾಗುವುದು. ಇದರ ಮುಂದುವರಿಕೆಯಾಗಿ 16, 17ರಂದು ರಾಜ್ಯ ಸೆಕ್ರೆಟರಿಯೇಟ್ ಸಭೆ, 18ರಿಂದ 20ರವರೆಗೆ ರಾಜ್ಯ ಸಮಿತಿ ಸಭೆ ನಡೆಯಲಿದೆ. ಕಾಸರಗೋಡು, ಕಣ್ಣೂರು ಜಿಲ್ಲಾ ಕಾರ್ಯದರ್ಶಿಗಳು  ಹೀನಾಯ ಸೋಲನುಭವಿಸಿರುವುದು ಸಭೆಯಲ್ಲಿ ಚರ್ಚೆಯಾಗಲಿದೆ. ಸೋಲಿಗೆ ಕಾರಣವೇನೆಂಬುದರ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.

You cannot copy contents of this page