ಲೌಡ್ ಸ್ಪೀಕರ್ ಉಪಯೋಗಿಸುವ ಆರಾಧನಾಲಯಗಳಿಗೆ ಪೊಲೀಸ್ ನೋಟೀಸು
ಕಾಸರಗೋಡು: ಜಿಲ್ಲೆಯಲ್ಲಿ ನಿಷೇಧಿತ ಲೌಡ್ ಸ್ಪೀಕರ್ ಬಳಸುತ್ತಿ ರುವ ಆರಾಧನಾಲಯಗಳು ಅದನ್ನು ಶೀಘ್ರ ತೆರವುಗೊಳಿಸುವಂತೆ ನಿರ್ದೇಶಿಸಿ ಪೊಲೀಸರು ನೋಟೀಸು ಜ್ಯಾರಿಗೊಳಿ ಸಿದ್ದಾರೆ. ಜಿಲ್ಲೆಯ ಹಲವು ಆರಾಧನಾ ಲಯಗಳ ಆಡಳಿತ ಸಮಿತಿಗಳಿಗೆ ಪೊಲೀಸರು ಈ ನೋಟೀಸು ಜ್ಯಾರಿಗೊಳಿಸಲಾಗಿದೆ. ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಬಳಸಿ ಶಬ್ದ ಮಲಿನೀಕರಣಗೊಳಿ ಸಬಾರದೆಂದೂ ಅದನ್ನು ತೆರವುಗೊಳಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಈ ಹಿಂದೆಯೇ ನಿರ್ದೇಶಿಸಿತ್ತು. ಆದರೆ ಅದನ್ನು ಪಾಲಿಸದೆ ಕಾನೂನು ವಿರುದ್ಧ ವಾಗಿ ಅಂತಹ ಲೌಡ್ ಸ್ಪೀಕರ್‌ಗಳನ್ನು ಜಿಲ್ಲೆಯ ಹಲವು ಆರಾಧನಾಲಯಗಳು ಈಗಲೂ ಬಳಸುತ್ತಿವೆ. ಆದ್ದರಿಂದ ಅಂತಹ ಆರಾಧನಾಲಯಗಳು ಈ ನೋಟೀಸು ಲಭಿಸಿದಾಕ್ಷಣದಿಂದ ಅದನ್ನು ಕಳಚಿ ಹೊರತುಪಡಿಸ ಬೇಕೆಂದು ಪೊಲೀಸರು ಜ್ಯಾರಿಗೊಳಿಸಿದ ನೋಟೀಸಿನಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಹಲವು ಆರಾಧನಾಲಯಗಳಲ್ಲಿ ಈಗಲೂ ಬಳಸಿ ಆ ಮೂಲಕ ಶಬ್ದ ಮಲಿನೀಕರಣ ನಡೆಸುತ್ತಿರುವುದಾ ಗಿಯೂ ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ನೂರಾರು ದೂರುಗಳು ರಾಜ್ಯ ಗೃಹಖಾತೆಗೆ ಲಭಿಸಿದೆ. ಅದನ್ನು ಪರಿಶೀಲಿಸಿದ ಗೃಹಖಾತೆ, ನಿಷೇಧಿತ ಲೌಡ್ ಸ್ಪೀಕರ್‌ಗಳನ್ನು ಬಳಸುವ ಆರಾಧನಾಲಯಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ನಿರ್ದೇಶ ನೀಡಿದೆ.