ವನಿತಾ ಸಹಕಾರಿ ಸಂಘ ಕಚೇರಿ ಉದ್ಘಾಟನೆ

ಕಾಸರಗೋಡು: ಶ್ರೀ ನಾರಾಯಣ ಗುರು ವನಿತಾ ಸಹಕಾರಿ ಸಂಘದ ಕಚೇರಿಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಕಾಸರಗೋಡು ಬ್ಯಾಂಕ್ ರಸ್ತೆಯ ಅರಮನ ಆರ್ಕೇಡ್‌ನಲ್ಲಿ ಕಚೇರಿ ಕಾರ್ಯಾರಂಭಗೊಂಡಿದೆ. ಸಂಘದ ಅಧ್ಯಕ್ಷೆ ಕೆ. ಸರೋಜಿನಿ ಅಧ್ಯಕ್ಷತೆ ವಹಿಸಿದರು. ನಗರಸಭಾ ಕೌನ್ಸಿಲರ್ ಕೆ.ಜಿ. ಪವಿತ್ರಾ ದೀಪ ಬೆಳಗಿಸಿದರು. ಸಹಕಾರಿ ಸಂಘ ಅಸಿಸ್ಟೆಂಟ್ ರಿಜಿಸ್ಟರ್ ಎ. ರವೀಂದ್ರನ್ ಠೇವಣಿ ಸ್ವೀಕಾರ ಉದ್ಘಾಟಿಸಿದರು. ಕೆ. ಭಾಸ್ಕರ, ಬಿ. ಸ್ವಪ್ನಾ, ಎನ್. ಚಂದ್ರಕಲಾ, ಕೆ. ಪ್ರವೀಣ್ ಕುಮಾರ್, ಕೆ.ಪಿ. ಸುಖೇಶ್, ಎ.ವಿ. ಕೃಷ್ಣನ್, ಪಿ.ಕೆ. ವಿನೋದ್ ಕುಮಾರ್, ಕಮಲಾಕ್ಷ ಸುವರ್ಣ, ಲೀಲಾವತಿ ನಾಯರ್ ಭಾಗವಹಿಸಿದರು.

You cannot copy contents of this page