ವಯನಾಡು ನಿವಾಸಿಗೆ ಬಂದ್ಯೋಡು ಅಡ್ಕದಲ್ಲಿ ಹಲ್ಲೆ

ಬಂದ್ಯೋಡು: ವಯನಾಡು ನಿವಾಸಿಯಾದ ರಮೇಶನ್ ಎಂಬವರು ತಿರುವನಂತಪುರ ನಿವಾಸಿಯಾದ ಮನು ಎಂಬಾತ ನಿನ್ನೆ ರಾತ್ರಿ ಬಂದ್ಯೋಡು ಅಡ್ಕದಲ್ಲಿ ಹಲ್ಲೆಗೈದ ಘಟನೆ ನಡೆದಿದೆ.

ರಾತ್ರಿ ೯ ಗಂಟೆಗೆ ನೀನು ಯಾಕೆ ಇಲ್ಲಿ ನಿಂತಿದ್ದಿ ಎಂದು ಪ್ರಶ್ನಿಸಿ ಹಲ್ಲೆಗೈದಿರುವುದಾಗಿ ರಮೇಶನ್ ಕುಂಬಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ತಿರುವನಂತಪುರ ನಿವಾಸಿ ಮನು ಯಾಕಾಗಿ ಆ ಹೊತ್ತಿನಲ್ಲಿ ಅಲ್ಲಿಗೆ ಬಂದನೆಂದು ಆತನನ್ನು ಪ್ರಶ್ನಿಸಬೇಕೆಂದು ರಮೇಶನ್ ಪೊಲೀಸರಲ್ಲಿ ಆಗ್ರಹಪಟ್ಟಿದ್ದಾನೆ. ಪೊಲೀಸರು ದೂರು ಸ್ವೀಕರಿಸಿ ಕೇಸು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಅಡ್ಕ ಕೇಂದ್ರೀಕರಿಸಿ ಎಂಡಿಎಂಎ, ಗಾಂಜಾ ಮಾರಾಟ ವ್ಯಾಪಕ ಗೊಂಡಿದೆಯೆಂದು ನಾಗರಿಕರು ತಿಳಿಸಿದ್ದಾರೆ.

RELATED NEWS

You cannot copy contents of this page