ವರ್ಚುವಲ್ ಸರದಿಯಲ್ಲಿ ಸುಗಮ ದಶನ-ಸಚಿವ

ಶಬರಿಮಲೆಯಲ್ಲಿ ವರ್ಚುವಲ್ ಸರದಿ ಮೂಲಕ ಮೊದಲ ದಿನವೇ ಸುಗಮ ದರ್ಶನಕ್ಕೆ ಅವಕಾಶ ನೀಡಲಾಗಿದೆಯೆಂದು ದೇವಸ್ವಂ ಸಚಿವ ವಿ.ಎನ್. ವಾಸವನ್ ತಿಳಿಸಿದ್ದಾರೆ. ವರ್ಚುವಲ್ ಕ್ಯೂ ಮೂಲಕ 30,000 ಭಕ್ತರು ಬುಕ್ ಮಾಡಿದ್ದು, ಈ ಪೈಕಿ 26,942 ಮಂದಿಗೆ ದರ್ಶನ ಲಭಿಸಿದೆ. ಸ್ಪೋಟ್ ಬುಕ್ಕಿಂಗ್ ಮೂಲಕ 1872 ಮಂದಿ ಆಗಮಿಸಿದ್ದಾರೆ ಎಂದು ಸಚಿವರು ತಿಳಿಸಿದ್ದು, ಈ ಬಗ್ಗೆ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯ ಬಳಿಕ ಸಚಿವರು ಮಾತನಾಡುತ್ತಿದ್ದರು. ಪೊಲೀಸರ ಮಧ್ಯಸ್ಥಿಕೆಯಿಂದ ನಿಮಿಷಕ್ಕೆ 80 ಭಕ್ತರು 18 ಮೆಟ್ಟಿಲು ಏರಿರುವು ದಾಗಿಯೂ ಅವರು ತಿಳಿಸಿದರು.  ಅಪ್ಪ ಪ್ರಸಾದ ಮತ್ತು ಅರವಣ ಪಾಯಸ ಸಾಕಷ್ಟು ಸಂಗ್ರಹವಿದೆ. ಪ್ರಯಾಣಕ್ಕಾಗಿ ಕೆಎಸ್‌ಆರ್‌ಟಿಸಿಯ ವ್ಯವಸ್ಥೆ ಮಾಡಲಾಗಿದೆಯೆಂದು ಸಚಿವರು ತಿಳಿಸಿದ್ದಾರೆ.

RELATED NEWS

You cannot copy contents of this page