ವಿ.ಡಿ. ಸತೀಶನ್‌ರ ಕರಾವಳಿ ಯಾತ್ರೆ 21ರಂದು : ಯಶಸ್ವಿಗೆ ನಾಳೆಯಿಂದ ವಿವಿಧ ಕಾರ್ಯಕ್ರಮ

ಕಾಸರಗೋಡು: ಮೀನು ಕಾರ್ಮಿ ಕರ ಹಾಗೂ ದೇಶದ ಭದ್ರತೆಗೆ ದೋಷಕರವಾಗಿರುವ ಸಮುದ್ರ ಹೊಯ್ಗೆ ಗಣಿಗಾರಿಕೆ ವಿರುದ್ಧ ವಿಪಕ್ಷ ಮುಖಂಡ ವಿ.ಡಿ. ಸತೀಶನ್ ಮುನ್ನಡೆಸುವ ಕರಾವಳಿ ಮುಷ್ಕರ ಯಾತ್ರೆಯನ್ನು ಯಶಸ್ವಿಗೊಳಿಸಲು ಐಕ್ಯರಂಗ ಕಾಸರಗೋಡು ವಿಧಾನಸಭಾ ಮಂಡಲ ಲೈಸನ್ ಸಮಿತಿ ಸಭೆ ತೀರ್ಮಾನಿಸಿದೆ.

ಎಪ್ರಿಲ್ ೨೧ರಂದು ನೆಲ್ಲಿಕುಂಜೆ ಕಡಪ್ಪುರದಿಂದ ಯಾತ್ರೆ ಆರಂಭಗೊಳ್ಳ ಲಿದೆ. ಇದರಂಗವಾಗಿ  ನಾಳೆ, 18ರಂದು ನಗರಸಭೆ, ಪಂಚಾಯತ್ ಮಟ್ಟದಲ್ಲಿ ಸಭೆಗಳು, ೧೮ರಂದು ಶಾಸಕ ಎನ್.ಎ. ನೆಲ್ಲಿಕುನ್ನುರ ನೇತೃತ್ವದಲ್ಲಿ, 19ರಂದು ವಾರ್ಡ್ ಘಟಕ ಮಟ್ಟದಲ್ಲಿ ಮುಖಂಡರ ನೇತೃತ್ವದಲ್ಲಿ ಪರ್ಯಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ  ನಡೆದ ಸಭೆಯನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಅಧ್ಯಕ್ಷ ಮಾಹಿನ್ ಕೇಳೋಟ್ ಅಧ್ಯಕ್ಷತೆ ವಹಿಸಿದರು. ಕೆ. ಖಾಲಿದ್ ಸ್ವಾಗತಿಸಿದರು. ಕೆ. ನೀಲಕಂಠನ್, ಎ. ಗೋವಿಂದನ್ ನಾಯರ್, ನ್ಯಾಯವಾದಿ ಎ. ಗೋವಿಂದನ್ ನಾಯರ್, ಎಂ.ಎ. ಕಡವತ್, ಅಬ್ದುಲ್ಲ ಕುಂಞಿ ಚೆರ್ಕಳ, ಎಂ.ಸಿ. ಪ್ರಭಾಕರನ್ ಸಹಿತ ಹಲವರು ಭಾಗವಹಿಸಿದರು. ಯಾತ್ರೆಯಲ್ಲಿ 400 ಮಂದಿ ಕಾಸರಗೋಡು ಮಂಡಲದಿಂದ ಭಾಗವಹಿಸಲು ತೀರ್ಮಾನಿಸಲಾಯಿತು.

RELATED NEWS

You cannot copy contents of this page