ವಿನ್‌ಟಚ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ
ಕಾಸರಗೋಡು: ಕಾಸರಗೋಡು ನಗರದ ಬ್ಯಾಂಕ್ ರೋಡ್‌ನಲ್ಲಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾದ ವಿನ್‌ಟಚ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಉದ್ಘಾಟನೆಯನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನಿರ್ವಹಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಫೌಂಡರ್ ಚೆಯರ್‌ಮೆನ್ ಅಬ್ದುಲ್ ಲತೀಫ್ ಉಪ್ಪಳ ಗೇಟ್ ಸ್ವಾಗತಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್, ಕಾಸರಗೋಡು ನಗರಸಭಾ ಚೆಯರ್‌ಮೆನ್ ವಿ.ಎಂ. ಮುನೀರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಮುಖ್ಯ ಅತಿಥಿಗಳಾಗಿದ್ದರು. ವಿನ್‌ಟಚ್ ಫೌಂಡರ್ ಡೈರೆಕ್ಟರ್‌ಗಳಾದ ಅಬ್ದುಲ್ ಕರೀಂ ಕೋಳಿಯಾಡ್, ಹನೀಫ್ ಅರಮನ, ಡೈರೆಕ್ಟರ್‌ಗಳಾದ ಡಾ| ಹಸೀನ ಹನೀಫ್, ಡಾ| ಆಯಿಶತ್ ಶಕೀಲ, ಮುಹಮ್ಮದ್ ಇರ್ಶಾದ್, ಮುಹಮ್ಮದ್ ದಿಲ್‌ಶಾದ್, ಮೆನೇಜಿಂಗ್ ಡೈರೆಕ್ಟರ್‌ಗಳಾದ ಡಾ| ಇಸ್ಮಾಯಿಲ್ ಫವಾಸ್, ಡಾ| ಮುನವರ್ ಡಾನಿಶ್ ಮೊದಲಾದವರು ಸೇರಿ ಅತಿಥಿಗಳನ್ನು ಸ್ವಾಗತಿಸಿದರು.
ಸಿ.ಟಿ. ಅಹಮ್ಮದಾಲಿ, ಎ. ಅಬ್ದುಲ್‌ರಹ್ಮಾನ್, ಎನ್.ಎ. ಅಬೂಬಕರ್, ಕಲ್ಲಟ್ರ ಮಾಹಿನ್ ಹಾಜಿ, ಕೊವ್ವಲ್ ಆಮು ಹಾಜಿ, ಡಾ| ಯೂಸಫ್ ಕುಂಬಳೆ, ಡಾ| ಅಲಿಕುಂಬಳೆ ಸಹಿತ ರಾಜಕೀಯ, ಸಾಮಾಜಿಕ ರಂಗದ ಹಲವರು ಪ್ರಮುಖ ರು, ಡಾಕ್ಟರ್‌ಗಳು ಭಾಗವಹಿಸಿದರು.
ಐದು ಮಹಡಿಗಳಲ್ಲಿರುವ ಆಸ್ಪತ್ರೆಯಲ್ಲಿ ನೂರು ಬೆಡ್‌ಗಳು, ಅತ್ಯಾಧುನಿಕ ಚಿಕಿತ್ಸಾ ಉಪಕರಣಗಳನ್ನು ಏರ್ಪಡಿಸಲಾಗಿದೆ. ೨೪ ಗಂಟೆ ಕಾಲ ಕಾರ್ಯಾಚರಿಸುವ ಎಮರ್ಜೆನ್ಸಿ ಟೀಂ, ಸಿ.ಟಿ. ಸ್ಕ್ಯಾನ್, ಎಂಆರ್‌ಐ ಡಯಾಬಿಟಿಕ್ ಸ್ಪೆಶಲ್ ಕೇರ್ ಮೊದಲಾದ ಸೌಕರ್ಯಗಳು ಆಸ್ಪತ್ರೆಯಲ್ಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.