ವಿವಾಹ ಭರವಸೆಯೊಡ್ಡಿ ಯುವತಿಗೆ ಕಿರುಕುಳ: ಮುಟ್ಟತ್ತೋಡಿ ನಿವಾಸಿ ವಿರುದ್ದ ಕೇಸು

ಕಾಸರಗೋಡು: ವಿವಾಹ ಭರವಸೆಯೊಡ್ಡಿ ಕಣ್ಣೂರು ನಿವಾಸಿಯಾದ 24ರ ಹರೆಯದ ಯುವತಿಯನ್ನು ವಿವಿಧೆಡೆಗಳ ಲಾಡ್ಜ್‌ಗಳಿಗೆ ತಲುಪಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಮುಟ್ಟತ್ತೋಡಿಯ ಅಬ್ದುಲ್ ಅಜ್ಮಲ್ (25) ಎಂಬಾತನ ವಿರುದ್ದ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2023 ಜೂನ್ 4ರಿಂದ 2025 ಜನವರಿ ವರೆಗೆ ಅಜ್ಮಲ್ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮೊದಲಾದೆಡೆಗಳಿಗೆ ಕರೆದೊಯ್ದು ಲಾಡ್ಜ್‌ಗಳಲ್ಲಿ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮದುವೆ ಭರವಸೆಯೊಡ್ಡಿ ಕಿರುಕುಳ ನೀಡಿರುವುದಾಗಿಯೂ, ಆದರೆ ಅನಂತರ ಮದುವೆಯಾಗದೆ ಹಿಂಜರಿದನೆಂದು ಯುವತಿ ದೂರಿದ್ದಾಳೆ. ಈ ಹಿನ್ನೆಲೆಯಲ್ಲಿ  ಅಜ್ಮಲ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಆರೋಪಿ ಪೊಲೀಸರ ಬಲೆಯಲ್ಲಿರುವುದಾಗಿ ಸೂಚನೆಯಿದೆ

You cannot copy contents of this page