ವೀಣಾವಾದಿನಿಯಲ್ಲಿ ವೇದ ನಾದಯೋಗ ತರಂಗಿಣಿ: ಕವಿಗೋಷ್ಠಿ

ಬದಿಯಡ್ಕ: ಕಾಲಘಟ್ಟ ಬದಲಾದ ಸನ್ನಿವೇಶದಲ್ಲಿ, ಯಾಂತ್ರೀಕರಣದ ವೇಗದ ಮಧ್ಯೆ ಮನುಷ್ಯತ್ವ ಕಾಣೆಯಾಗಬಾರದು. ಸಂಸ್ಕೃತಿಯನ್ನು ಭದ್ರಗೊಳಿಸುವ, ಭಾವನಾವಲಯ ಉದ್ಧೀಪಿಸುವ ನಿಟ್ಟಿನಲ್ಲಿ ಕಲೆ, ಸಾಹಿತ್ಯಗಳು ಬೆಂಬಲ ನೀಡುತ್ತದೆ ಎಂದುಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ತಿಳಿಸಿದರು.
ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆ ವೀಣಾವಾದಿನಿಯಲ್ಲಿ ನಿನ್ನೆ ಆರಂಭಗೊAಡ ವೇದ ನಾದಯೋಗತರಂಗಿಣಿಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕೃತಿಕ ಭವನ ಬಾಲರಾಮವರಮ್‌ಇದರಉದ್ಘಾಟನೆಯ ಅಂಗವಾಗಿ ನಡೆದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕಾರವAತರಾಗಲು, ಭಾಷಾ ಭಿಮಾನ ಬೆಳೆಯಲು ಸಾಹಿತ್ಯ ಮಹತ್ತರ ಪಾತ್ರ ವಹಿಸುತ್ತದೆ. ಕವಿತೆಯಧ್ವನಿ ಪೂರ್ಣವಾಗಿರ ಬೇಕಿದ್ದು, ಲಾಲಿತ್ಯವಲ್ಲ. ಅದು ವಾಚ್ಯವೂ ಅಲ್ಲ. ಸಮಗ್ರವಾದ ವ್ಯಕ್ತಿತ್ವ ನಿರ್ಮಾಣ ಸಾಹಿತ್ಯ, ಕಲೆಗಳ ಮೂಲಕ ಬಲ ಪಡೆಯುತ್ತದೆ ಎಂದವರು ತಿಳಿಸಿದರು.
ಲೇಖಕಿ, ಕವಯಿತ್ರಿ ರಾಜಶ್ರೀ ಟಿ. ರೈ. ಪೆರ್ಲ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಸಾಹಿತ್ಯಅಧ್ಯಯನ ನಮ್ಮನ್ನು ವಿಶಾಲಗೊಳಿಸುತ್ತದೆ. ನಿಖರ ಆಲೋ ಚನೆಗಳು, ಮತ್ತು ಭಾವನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಶ್ರೀಮಂತ ವಿಧಾನವೇ ಸಾಹಿತ್ಯ-ಕವನ-ಕಥಾರೂಪಗಳಾಗಿವೆ ಎಂದವರು.
ನರಸಿAಹ ಭಟ್‌ಏತಡ್ಕ, ಸುಶೀಲಾ ಪದ್ಯಾಣ, ಜೋತ್ಸಾö್ನ ಕಡಂದೇಲು, ಸುಂದರ ಬಾರಡ್ಕ, ಆಶ್ವಿನಿ ಕೋಡಿಬೈಲು, ಸಂಧ್ಯಾಗೀತ ಬಾಯಾರು, ಸೌಮ್ಯಾ ಪ್ರವೀಣ್, ರೇಖಾ ಅಣಂಗೂರು, ಎಸ್.ಎನ್. ಭಟ್ ಸೈಪಂಗಲ್ಲು, ಸಂಧ್ಯಾಕೊರೆಕ್ಕಾನ, ಪ್ರಮೀಳಾ ಚುಳ್ಳಿಕ್ಕಾನ, ಅಮೃತ ಓಟೆಕ್ಕಾಡು, ಸುಶ್ಮಿತಾ ಗೋಸಾಡ, ಪುರುಷೋತ್ತಮ ಭಟ್.ಕೆ.ಸ್ವರಚಿತ ಕವನಗಳನ್ನು ವಾಚಿಸಿದರು.
ಹಿರಿಯ ಸಾಹಿತಿ ಡಾ. ವಸಂತ ಕುಮಾರ್ ಪೆರ್ಲ, ವೀಣಾ ವಾದಿನಿಯ ವಿದ್ವಾನ್.ಯೋಗೀಶ ಶರ್ಮಾ ಬಳ್ಳಪದವು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯ ದರ್ಶಿ ಅಖೀಲೇಶ್ ನಗುಮುಗಂ ಉಪಸ್ಥಿತರಿದ್ದರು. ವಿ಼ಣು ಶರ್ಮ ಪ್ರಾಥÀðನಾ ಹಾಡಿದರು. ಯೋಗೀಶ ಶರ್ಮ ಸ್ವಾಗತಿಸಿ, ವಂದಿಸಿದರು. ಬ್ರಹ್ಮಶ್ರೀ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ಇವರ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯಿತು. ಅಪರಾಹ್ನ ಉದ್ಘಾಟನಾ ಸಮಾರಂಭ ನಡೆಯಿತು.

Leave a Reply

Your email address will not be published. Required fields are marked *

You cannot copy content of this page