ಶಬರಿಮಲೆ: ನಾಳೆ ಬೆಳಿಗ್ಗೆ ೧೧ ಗಂಟೆ ಬಳಿಕ ವಾಹನಗಳಿಗೆ ನಿಯಂತ್ರಣ

ಶಬರಿಮಲೆ: ನಾಳೆ ನಡೆಯಲಿ ರುವ ಚಿನ್ನಾಭರಣ ಶೋಭಯಾತ್ರೆಗೆ ಸಂಬಂಧಿಸಿ ಶಬರಿಮಲೆಯಲ್ಲಿ ಪೂಜಾಸಮಯದಲ್ಲಿ ಉಂಟು ಮಾಡಿ ರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಅಯ್ಯಪ್ಪ ಭಕ್ತರನ್ನು ನಿಲೈಕಲ್‌ನಿಂದ ಪಂಪಾಕ್ಕೆ ತೆರಳು ವುದಕ್ಕೆ ಪೊಲೀಸರು ನಿಯಂತ್ರಣ ಏರ್ಪಡಿಸಿರುವುದಾಗಿ ತಿರುವಿದಾಂ ಕೂರ್ ದೇವಸ್ವಂ ಮಂಡಳಿ ತಿಳಿಸಿದೆ. ನಾಳೆ ಮಧ್ಯಾಹ್ನದ ಪೂಜೆಯ ಬಳಿಕ ಸಂಜೆ ೫ ಗಂಟೆಗೆ ಶಬರಿಮಲೆಯ ನಡೆ ಬಾಗಿಲು ತೆರೆಯಲಾಗುವುದು. ಆದುದರಿಂದ ನಾಳೆ ಬೆಳಿಗ್ಗೆ ೧೧ ಗಂಟೆವರೆಗೆ ಮಾತ್ರವೇ ನಿಲೈಕಲ್‌ಗೆ ತಲುಪುವ ಅಯ್ಯಪ್ಪ ಭಕ್ತರ ವಾಹನ ಗಳನ್ನು ಪಂಪಾಕ್ಕೆ ಬಿಡಲಾಗುವುದು. ೧೧ ಗಂಟೆ ಕಳೆದು ತಲುಪುವವರಿಗೆ ೩ ಗಂಟೆಯಾದರೂ ನಿಲೈಕಲ್‌ನಲ್ಲೇ ಮುಂದುವರಿಯಬೇಕಾಗಿ ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಿರುವಿದಾಂಕೂರ್ ದೇವಸ್ವಂ ಬೋರ್ಡ್ ಈ ವಿಷಯ ಪ್ರಕಟಿಸಿದೆ. ಸಾಮಾನ್ಯವಾಗಿ ಮಧ್ಯಾಹ್ನದ ಪೂಜೆಯ ಬಳಿಕ ೩ ಗಂಟೆಗೆ ಶಬರಿಮಲೆಯ ನಡೆ ತೆರೆಯಲಾಗುತ್ತಿದೆ. ಆದರೆ ಚಿನ್ನಾಭರಣ ಶೋಭಾಯಾತ್ರೆಗೆ ಸಂಬಂಧಿಸಿ ನಡೆ ಬಾಗಿಲು ತೆರೆಯುವುದನ್ನು ಸಂಜೆ ೫ ಗಂಟೆಗೆ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಸನ್ನಿಧಾನಕ್ಕಿರುವ ಭಕ್ತರ ದಟ್ಟಣೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಈ ನಿಯಂತ್ರಣ ಏರ್ಪಡಿಸಲಾಗಿದೆ.

RELATED NEWS

You cannot copy contents of this page