ಶಬರಿಮಲೆಯಲ್ಲಿ ಮಮ್ಮುಟ್ಟಿಗೆ ಬೇಕಾಗಿ ಮೋಹನ್‌ಲಾಲ್‌ರಿಂದ ಸೇವೆ

ಪತ್ತನಂತಿಟ್ಟ: ಮಮ್ಮುಟ್ಟಿ ಶೀಘ್ರ ಗುಣಮುಖ ಹೊಂದಲೆಂದು ಹಾರೈಸಿ ಶಬರಿಮಲೆಯಲ್ಲಿ ಮೋಹನ್‌ಲಾಲ್ ಪ್ರತ್ಯೇಕ ಸೇವೆ ನಡೆಸಿದರು. ಮುಹಮ್ಮದ್ ಕುಟ್ಟಿ, ವಿಶಾಖ ನಕ್ಷತ್ರದ ಹೆಸರಲ್ಲಿ ಮೋಹನ್ ಲಾಲ್ ಸೇವೆ ನಡೆಸಿದ್ದಾರೆ. ಶಬರಿಮಲೆಗೆ ತೆರಳುವುದಕ್ಕೂ ಮುಂಚಿತ ಮೋಹನ್ ಲಾಲ್ ಮಮ್ಮುಟ್ಟಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸೂಪರ್ ಸ್ಟಾರ್ ಪದವಿಯ ಹೊರತಾಗಿ ಇವರಿಬ್ಬರೂ ಹತ್ತಿರದ ಸ್ನೇಹಿತರಾಗಿದ್ದರು. ಎಂಬುರಾನ್ ಎಂಬ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲಿ ಮೋಹನ್‌ಲಾಲ್ ಶಬರಿಮಲೆ ಕ್ಷೇತ್ರ ಸಂದರ್ಶನ ನಡೆಸಿದ್ದಾರೆ. ಪಂಪಾದಿಂದ ಇರುಮುಡಿ ಕಟ್ಟು ಕಟ್ಟಿ ಮೋಹನ್‌ಲಾಲ್ ಸನ್ನಿಧಾನಕ್ಕೆ ತಲುಪಿದ್ದಾರೆ.

ಈ ತಿಂಗಳ ೨೭ರಂದು ಮೋಹನ್‌ಲಾಲ್ ನಾಯಕನಟನಾ ಗಿರುವ ಪೃಥ್ವಿರಾಜ್ ನಿರ್ದೇಶಿಸಿದ ಎಂಬುರಾನ್ ಪ್ರದರ್ಶನಕ್ಕೆ ತಲುಪಲಿದೆ.

RELATED NEWS

You cannot copy contents of this page