ಶಾಲಾ ಬಸ್ ಅಪಘಾತ: ತಪ್ಪಿದ ಭಾರೀ ದುರಂತ

ಕಾಸರಗೋಡು: ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾದ ಘಟನೆ ಚಿತ್ತಾರಿಯಲ್ಲಿ  ಸಂಭವಿಸಿದೆ.

ರಸ್ತೆ ಬದಿಯ ಹೊಂಡದತ್ತ ಬಸ್ ವಾಲಿದ್ದು ಅಲ್ಲಿದ್ದ ತೆಂಗಿನ ಮರವೊಂದಕ್ಕೆ ತಾಗಿ ನಿಂತಿದೆ. ಇದರಿಂದ ಭಾರೀ ಅಪಾಯ ತಪ್ಪಿದೆ.

ಇಂದು ಬೆಳಿಗ್ಗೆ 8.30ರ ವೇಳೆ ಸೌತ್  ಚಿತ್ತಾರಿಯ ವಿದ್ಯುತ್ ಕಚೇರಿ ಸಮೀಪ ಅಫಘಾತವುಂಟಾಗಿದೆ. ಕೋಟಿಕುಳಂ ನರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ಬಸ್ ಅಪಘಾತಕ್ಕೀಡಾಗಿದೆ. ಬಸ್‌ನಲ್ಲಿ 12 ಮಕ್ಕಳಿದ್ದರು. ಇವರನ್ನು ಅದಿಂಞಾಲ್‌ನ  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ವಿಷಯ ತಿಳಿದು ಹೊಸದುರ್ಗ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಬಳಿಕ ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಯಿತು.

You cannot copy contents of this page