ಶಾಲೆ ಮುಂದೆ ಕಾರು-ಬೈಕ್ ಢಿಕ್ಕಿ ಹೊಡೆದು ಯುವಕ ಸಾವು: ಸ್ನೇಹಿತನಿಗೆ ಗಂಭೀರ

ಕಾಸರಗೋಡು: ಕಾರು ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದು ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ವಲಿಯಪರಂಬ ಪಂಚಾಯತ್ ಕನ್ನುವೀಡ್ ಕಡಪ್ಪುರ ಸ್ವಾಮಿ ಮಠ ಬಳಿಯ ಇ. ರಾಜೀವನ್-ಕೆ.ವಿ. ಪ್ರಜಿನ ದಂಪತಿ ಪುತ್ರ ಕೆ.ವಿ. ವಾಸುದೇವ್ (20) ಸಾವನ್ನಪ್ಪಿದ ಯುವಕ. ಈತ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದ ಕನ್ನುವೀಡ್ ಕಡಪ್ಪುರದ  ಆದಿತ್ಯನ್ (20) ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಚಂದೇರ ಜಿಯುಪಿ ಶಾಲೆಯ ಮುಂದಿನ ರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಕಾಲಿಕಡವಿನಿಂದ ತೃಕರಿಪುರದತ್ತ ಬರುತ್ತಿದ್ದ ಬೈಕ್ ವಾಹನವೊಂದನ್ನು ಓವರ್‌ಟೇಕ್ ಮಾಡಲೆತ್ನಿಸಿದ್ದು ಅದು ಎದುರುಗಡೆಯಿಂದ ಬಂದ ಕಾರಿಗೆ ಢಿಕ್ಕಿ ಹೊಡೆದು   ಅಪಘಾತ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ವಾಸುದೇವ್ ತಕ್ಷಣ ಅಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಆದಿತ್ಯನ್‌ನನ್ನು ನಂತರ ಊರವರು ಆಸ್ಪತ್ರೆಗೆ ಸಾಗಿಸಿದರು.

ಮೃತ ವಾಸುದೇವ್ ಹೆತ್ತವರ ಹೊರತಾಗಿ ಸಹೋದರಿ ಕೆ.ವಿ. ವರಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page