ಶುಚೀಕರಣ ಯಜ್ಞಕ್ಕೆ ಜಿಲ್ಲಾಧಿಕಾರಿ ಚಾಲನೆ

ಕಾಸರಗೋಡು: ಜಿಲ್ಲಾಡಳಿತ, ಸಾಮಾಜಿಕ ಸಂಘ ಸಂಸ್ಥೆಗಳ ನಿರ್ದೇಶಕರು ಜಂಟಿಯಾಗಿ ಆಯೋಜಿಸಿದ ಶುಚೀಕರಣ ಯಜ್ಞವಾದ ‘ಅಳಗೇರುಂ ಕೇರಳಂ’ವನ್ನು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸಿವಿಲ್ ಸ್ಟೇಷನ್ ಪರಿಸರದಲ್ಲಿ ಉದ್ಘಾಟಿಸಿದರು. ಬಳಿಕ ಸಿವಿಲ್ ಸ್ಟೇಷನ್ ಪರಿಸರ ಹಾಗೂ ಕೈಗಾರಿಕಾ ಪ್ರಾಂಗಣವನ್ನು ಶುಚೀಕರಿಸಲಾಯಿತು. ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೈನಿಕ್ಕರ, ಎಡಿಎಂ ಕೆ.ವಿ. ಶ್ರುತಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಮಾಜಿಕ ಸಂಘಸಂಸ್ಥೆಗಳ ಕಾರ್ಯಕರ್ತರು, ಕಾಸರಗೋಡು ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕರ್ತರು, ಚೆಂಗಳ ಪಂಚಾಯತ್‌ನ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು, ಸಿವಿಲ್ ಸ್ಟೇಷನ್ ನೌಕರರು ಶುಚೀಕರಣದಲ್ಲಿ ಭಾಗಿಯಾದರು.

You cannot copy contents of this page