ಪೆರ್ಲ: ಶೇಣಿ ಬಾರೆದಳದಲ್ಲಿ ಮನೆಯೊಂದು ಬೆಂಕಿ ಆಕಸ್ಮಿಕಕ್ಕೆ ತುತ್ತಾಗಿ ಹೊತ್ತಿ ಉರಿದಿದೆ. ಸ್ಥಳೀಯರಾದ ಬಟ್ಯ ನಾಯ್ಕರ ಹೆಂಚು ಹಾಸಿದ ಮನೆ ಬೆಂಕಿ ಉರಿದು ನಾಶವಾಗಿದೆ. ಬಟ್ಯ ನಾಯ್ಕ ಹಾಗೂ ಪುತ್ರನ ಇಬ್ಬರು ಮಕ್ಕಳು ಮನೆಯೊ ಳಗಿದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಅಪರಾಹ್ನ ಸಂಭವಿಸಿದ ದುರಂ ತದಲ್ಲಿ ಮನೆಯಲ್ಲಿದ್ದ ನಗ-ನಗದು ಸಹಿತ ಸ್ಥಳದ ದಾಖಲೆ, ಮನೆ ಉಪಕರಣಗಳೆಲ್ಲಾ ಬೆಂಕಿಗಾಹು ತಿಯಾಗಿದೆ. ಮನೆಯೊಳಗಿದ್ದ ಅಡುಗೆ ಅನಿಲ ಜಾಡಿ ಸಿಡಿದು ದೂರಕ್ಕೆ ಎಸೆಯಲ್ಪಟ್ಟಿದೆ. ಇದರ ಆಘಾತಕ್ಕೆ ಮನೆ ಗೋಡೆಗಳು ಬಿರುಕುಬಿಟ್ಟಿವೆ.
ಸ್ಥಳೀಯರು ಹಾಗೂ ಅಗ್ನಿಶಾಮ ಕದಳ ಬೆಂಕಿ ನಂದಿಸಿದೆ. ಆದರೆ ಈ ವೇಳ ಮನೆ ಹಾಗೂ ಅಲ್ಲಿದ್ದ ಎಲ್ಲಾ ವಸ್ತುಗಳು ಕೂಡಾ ಉರಿದು ನಾಶವಾ ಗಿದೆ. ಮನೆ ಮಂದಿಗೆ ವಾಸಕ್ಕೆ ಪಂ. ಅಧ್ಯಕ್ಷ ಸೋಮಶೇಖರ ತಾತ್ಕಾಲಿಕ ವ್ಯವಸ್ಥೆ ಏರ್ಪಡಿಸಿದ್ದಾರೆ.