ಶೇಣಿಯಲ್ಲಿ ಮುಂದುವರಿಯುತ್ತಿರುವ ಉಪಜಿಲ್ಲಾ ಶಾಲಾ ಕಲೋತ್ಸವ

ಪೆರ್ಲ: ಶೇಣಿ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಾಡಿನ ಉತ್ಸವವಾಗಿ ಬದಲಾಗಿದೆ. ಇಂದು ಬೆಳಿಗ್ಗೆಯಿಂದ ಜನಪದ ನೃತ್ಯ, ಭರತನಾಟ್ಯ, ಕೂಚುಪುಡಿ, ತಿರುವಾದಿರ, ಯಕ್ಷಗಾನ ಮೊದಲಾದ ಸ್ಪರ್ಧೆಗಳು ವಿವಿಧ ವೇದಿಕೆಗಳಲ್ಲಿ ನಡೆಯುತ್ತಿದೆ. ಒಟ್ಟು 346 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.  ಈಬಾರಿ ಹೆಚ್ಚುವರಿ ಯಾಗಿ ಸೇರಿದ ಮಂಗಳಂಕಳಿ, ಪಣಿಯ ನೃತ್ಯ, ಇರುಳನೃತ್ಯ ಮಲಪ್ಪುಲಯಾಟ್ಟಂ ಇಂದು ವೇದಿಕೆ ನಾಲ್ಕರಲ್ಲಿ ನಡೆಯುತ್ತಿದೆ.

You cannot copy contents of this page