ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕೋಟಿ ಪಂಚಾಕ್ಷರಿ ಜಪ ಯಜ್ಞ ಸಮಿತಿ ರೂಪೀಕರಣ

ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದಶಂಬರ 16ರಿಂದ ಜರಗಲಿರುವ ಕೋಟಿ ಪಂಚಾಕ್ಷರಿ ಜಪ ಯಜ್ಞ, ಶ್ರೀಚಕ್ರ ಪೂಜೆಯನ್ನು ಯಶಸ್ವಿಗೊಳಿ ಸಲು ಸಮಿತಿ ರೂಪೀಕರಣ ಸಭೆ ಜರಗಿತು. ಉಚ್ಚಿಲ ಪದ್ಮನಾಭ ತಂತ್ರಿ ಉದ್ಘಾಟಿಸಿದರು. ಕ್ಷೇತ್ರ ಟ್ರಸ್ಟಿ ಬೋರ್ಡ್ ಅಧ್ಯಕ್ಷ ಗೋವಿಂದ ನಾಯರ್ ಅಧ್ಯಕ್ಷತೆ ವಹಿಸಿದರು. ರವೀಶ ತಂತ್ರಿ ಕುಂಟಾರು, ಕೆ. ರಾಮ ಪ್ರಸಾದ, ಉಷಾ ಎಸ್, ಉಮೇಶ್ ಅಣಂಗೂರು, ಮನೋಜ್ ಎ.ಸಿ, ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ರಾಜೇಶ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಡಾ. ಅನಂತ ಕಾಮತ್, ಮಾಜಿ ಕಾರ್ಯದರ್ಶಿ ಮುರಳೀಧರನ್, ಸಿ.ವಿ. ಪೊದುವಾಳ್ ಮಾತನಾಡಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಮಿತಿಗೆ ಪ್ರಧಾನ ಗೌರವಾಧ್ಯಕ್ಷರುಗಳಾಗಿ ಶ್ರೀ ಸಚ್ಚಿದಾನಂದ ಭಾರತಿ, ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಹಾಗೂ ಯಜ್ಞ ಸಮಿತಿಯ ಅಧ್ಯಕ್ಷರಾಗಿ ಡಾ| ಅನಂತ ಕಾಮತ್, ಕಾರ್ಯಾಧ್ಯರಾಗಿ ಕೆ. ರಾಮ ಪ್ರಸಾದ, ಕೆ.ಎನ್. ವೆಂಕಟ್ರಮಣ ಹೊಳ್ಳ, ಕಾರ್ಯದರ್ಶಿಯಾಗಿ ಕೆ. ಹರೀಶ್ ಪೂಜಾರಿ, ಕೋಶಾಧಿಕಾರಿ ಯಾಗಿ ರಾಜೇಶ್ ಆಯ್ಕೆಯಾದರು.

RELATED NEWS

You cannot copy contents of this page