ಸಂಚರಿಸುತ್ತಿದ್ದ ರೈಲಿನಿಂದ ಬಿದ್ದು ಯುವಕನಿಗೆ ಗಂಭೀರ

ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಿಂದ  ಯುವಕ ಹೊರಕ್ಕೆಸೆ ಯಲ್ಪಟ್ಟು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಾಞಂಗಾಡ್ ಪುಲ್ಲೂರು ನಿವಾಸಿ ನಿತಿನ್ (22) ಎಂಬಾತ ಗಾಯಗೊಂಡಿದ್ದಾನೆ. ಈತ ನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಗಳೂರಿ ನಿಂದ ಕಾಸರಗೋಡು ಭಾಗಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿ ನಿತಿನ್ ಪ್ರಯಾಣಿಸುತ್ತಿದ್ದನು. ನಿನ್ನೆ ಸಂಜೆ ರೈಲು ಮಂ ಜೇಶ್ವರ ಬಳಿ ಕಣ್ವತೀರ್ಥಕ್ಕೆ ತಲುಪಿ ದಾಗ ಈತ ಹೊರಕ್ಕೆಸೆಯಲ್ಪ ಟ್ಟಿದ್ದಾನೆ. ವಿಷಯ ತಿಳಿದು ಪೊಲೀ ಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ನಾಗರಿಕರು ಆತನನ್ನು ಆಸ್ಪತ್ರೆಗೆ ತಲುಪಿಸಿದ್ದರು. ಗಾಯಗೊಂಡ ವ್ಯಕ್ತಿ ಯ ಹೆಚ್ಚಿನ ಮಾಹಿತಿ ಲಭಿಸಿಲ್ಲ ವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page