ಸಚಿವರಾಗಿರುವ ವೇಳೆ ಸಿನಿಮಾ ಅಭಿನಯ ಬೇಡ: ಸುರೇಶ್‌ಗೋಪಿಗೆ ಕೇಂದ್ರ ಸರಕಾರ
ನವದೆಹಲಿ: ಕೇಂದ್ರ ಸಚಿವರಾಗಿ ರುವ ವೇಳೆ ಸಿನಿಮಾದಲ್ಲಿ ಅಭಿನಯಿ ಸುವುದು ಬೇಡವೆಂಬ ನಿರ್ದೇಶವನ್ನು ಕೇಂದ್ರ ಸರಕಾರ ಸುರೇಶ್ ಗೋಪಿಗೆ ನೀಡಿದೆ. ಇದರಿಂದಾಗಿ ಸದ್ಯ ಸಿನಿಮಾ ಜೀವನಕ್ಕೆ ತಾತ್ಕಾಲಿಕವಾಗಿ ವಿರಾಮ ಘೋಷಿಸಬೇಕಾದ ಸ್ಥಿತಿ ಸುರೇಶ್ ಗೋಪಿಗೆ ಉಂಟಾಗಿದೆ.
ತೃಶೂರು ಕ್ಷೇತ್ರದ ಸಂಸದರಾಗಿರುವ ಸುರೇಶ್‌ಗೋಪಿ ಈಗ ಕೇಂದ್ರ ಸಚಿವರಾ ಗಿಯೂ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆ ಯಲ್ಲಿ ಅದರ ಜೊತೆಗೆ ಸಿನಿಮಾ ಅಭಿನಯ ಜೀವನವನ್ನು ಮುಂದುವರಿಸಿ ದಲ್ಲಿ ಅದು ಜನಸೇವೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಅದರಿಂದಾಗಿ ಸುರೇಶ್ ಗೋಪಿಗೆ ಸದ್ಯ ಸಿನಿಮಾದಲ್ಲಿ ಅಭಿನಯಿಸಲು ಅನುಮತಿ ನೀಡುವಂತಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಿನಿಮಾದಲ್ಲೂ ಮುಂದುವರಿಯುವುದಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಅನುಕೂಲಕರ ನಿಲುವು ಕೈಗೊಂಡಿರಲಿಲ್ಲ. ಅದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಾ ಇದೇ ನಿಲುವು ವ್ಯಕ್ತಪಡಿಸಿದ್ದಾರೆ. ಗೆದ್ದು ಬಂದ ಕ್ಷೇತ್ರದ ಬಗ್ಗೆ ಸಾಕಷ್ಟು ಗಮನಹರಿಸಬೇಕು. ಇದರ ಜೊತೆಗೆ ಸಚಿವ ಸ್ಥಾನದಲ್ಲೂ ಸಕ್ರಿಯವಾಗಿ ರಬೇಕೆಂಬ ನಿರ್ದೇಶವನ್ನೂ ಸುರೇಶ್‌ಗೋಪಿಗೆ ಕೇಂದ್ರ ಸರಕಾರ ನೀಡಿದೆ. ಅದರಿಂದಾಗಿ ಸಿನಿಮಾ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗದಿರುವ ಇಕ್ಕಟ್ಟಿನಲ್ಲಿ ಸುರೇಶ್‌ಗೋಪಿ ಈಗ ಸಿಲುಕಿ ಕೊಂಡಿದ್ದಾರೆ. ಸುರೇಶ್ ಗೋಪಿ ಈಗ ‘ಒಟ್ಟಕೊಂಬನ್’ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅದರ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಕೇಂದ್ರ ಸರಕಾರದ ನಿರ್ದೇಶದಿಂದ ಅದರ ಚಿತ್ರೀಕರಣ ಪೂರ್ತೀಕರಿಸಲು ಸಾಧ್ಯವಾಗದ ಸ್ಥಿತಿಯೂ ಈಗ ನಿರ್ಮಾಣವಾಗಿದೆ. ಮ್ಯಾಥ್ಯೂ ಥೋಮಸ್ ಈ ಚಿತ್ರ ನಿರ್ದೇಶಕ ರಾಗಿದ್ದಾರೆ. ಸಿನಿಮಾದಲ್ಲಿ ಅಭಿ ನಯಿಸಲು ಅನುಮತಿ ನೀಡಬೇಕೆಂದು ಸುರೇಶ್ ಗೋಪಿ ಕೇಂದ್ರ ಸರ ಕಾರದೊಡನೆ ಮನವಿ ಮಾಡಿ ಕೊಂಡಿದ್ದರು. ಅದಕ್ಕೆ ಸರಕಾರ ತನ್ನ ಈ ನಿಲುವು ವ್ಯಕ್ತಪಡಿಸಿದೆ.