ಸನಾತನ ಧರ್ಮ ವಿವಾದ :ಕರ್ನಾಟಕ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧವೂ ಎಫ್‌ಐಆರ್

ರಾಮ್‌ಪುರ್(ಯುಪಿ): ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಚಿವ ಡಿ.ಎಂ.ಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿ ಕಾರ್ಜನ ಖರ್ಗೆಯವರ ಪುತ್ರನೂ, ಕರ್ನಾ ಟಕ ಸಚಿವರಾದ ಪ್ರಿಯಾಂಕ ಖರ್ಗೆ  ವಿರುದ್ಧ ಉತ್ತರಪ್ರದೇಶದ ರಾಮ್‌ಪುರ್  ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಎಫ್‌ಐಆರ್) ದಾಖಲು ಗೊಂಡಿದೆ.  ಐಪಿಸಿ ಸೆಕ್ಷನ್ ೨೯೫ ಎ (ಧಾರ್ಮಿಕ ಭಾವನೆಗಳನ್ನು ಉದ್ದೇಶ ಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), ೧೫೩ ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜನೆಗೆ) ಅಡಿಯಲ್ಲಿ ಉದಯನಿಧಿ ಸ್ಟಾಲಿನ್ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಕೀಲರಾದ ಹರ್ಷಗುಪ್ತಾ ಮತ್ತು ರಾಮ್ ಸಿಂಗ್ ಲೋಧಿ ಅವರು ನೀಡಿದ ದೂರಿನ ಮೇಲೆ ಈ ಇಬ್ಬರು ಸಚಿವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಇಬ್ಬರು ರಾಜ ಕಾರಣಿಗಳ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆಯೆಂದು ದೂರಿನಲ್ಲಿ ಆರೋಪಿಸಲಾಗಿದೆ.  ಉದಯನಿಧಿ ಸ್ಟಾಲಿನ್ ವಿರುದ್ಧ ದಿಲ್ಲಿಯಲ್ಲಿ ಈಗಾಗಲೇ ಬೇರೊಂದು ಪ್ರಕರಣ ದಾಖಲುಗೊಂಡಿದೆ. ಅದರ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಅವರ ವಿರುದ್ಧ ಈ ಪ್ರಕರಣ ದಾಖಲುಗೊಂಡಿದೆ.

ನಾವು ಡೆಂಗ್ಯೂ, ಮಲೇರಿಯ ಅಥವಾ ಕೊರೊನಾ ವೈರಸ್ ಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಬದಲಾಗಿ ನಾವು ಅವುಗಳನ್ನು ನಿರ್ಮೂಲನೆ ಮಾಡ ಬೇಕು. ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ತಮಿಳುನಾಡಿನಲ್ಲಿ ಕಳೆದ ಶನಿವಾರ ಹೇಳಿದ್ದರು. ಈ ಹೇಳಿಕೆಯನ್ನು  ಅವರು  ಬಳಿಕ ಪದೇಪದೇ ಸಮರ್ಥಿಸುತ್ತಾ ಬಂದಿದ್ದಾರೆ.

RELATED NEWS

You cannot copy contents of this page