ಸರ್ವೀಸ್ ಸ್ಟೇಶನ್ ನಿರ್ವಹಣೆಗಾರ ಹೃದಯಾಘಾತದಿಂದ ನಿಧನ

ಕಾಸರಗೋಡು: ವಿದ್ಯಾನಗರ ಪೆಟ್ರೋಲ್ ಬಂಕ್‌ನೊಂದಿಗೆ ಹೊಂದಿಕೊಂಡು ಸರ್ವೀಸ್ ಸ್ಟೇಶನ್ ನಡೆಸುತ್ತಿದ್ದ  ಮುಳ್ಳೇ ರಿಯ ಕೋಳಿಯಡ್ಕ ನಿವಾಸಿ ಉದಯನ್ ಬಿ (54) ಎಂಬ ವರು ಹೃದಯಾಘಾ ತದಿಂದ ನಿಧನಹೊಂದಿದರು. ನಿನ್ನೆ ರಾತ್ರಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿ ಮರಳುತ್ತಿದ್ದಾಗ ಇವರಿಗೆ ಎದೆನೋವು ಕಾಣಿಸಿಕೊಂ ಡಿತ್ತೆನ್ನಲಾಗಿದೆ. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸ ಣೆಗೊಳಗಾಗಿದ್ದು ಅಷ್ಟರಲ್ಲಿ ಕುಸಿದು ಬಿದ್ದು ಮೃತ ಪಟ್ಟರೆನ್ನಲಾಗಿದೆ.

ಮೃತರು ತಾಯಿ, ಪತ್ನಿ ಶಾಂತ, ಪುತ್ರ ವಿನೋದ್, ಪುತ್ರಿ, ಸಹೋದರ, ಸಹೋದರಿ ಸಹಿತ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page