ಸಲಾಲದಲ್ಲಿ ವಾಹನ ಅಪಘಾತ ಜೂನ್‌ನಲ್ಲಿ ವಿವಾಹವಾಗಲಿದ್ದ ಯುವಕ ಮೃತ್ಯು

ಕಾಸರಗೋಡು: ಸಲಾಲದಲ್ಲಿ ವಾಹನ ಅಪಘಾತದಲ್ಲಿ ಮೃತಪಟ್ಟ ಕಳನಾಡು ನಿವಾಸಿಯಾದ ಯುವಕನ ಮೃತದೇಹವನ್ನು ಊರಿಗೆ ತಂದು ಸಂಸ್ಕರಿಸಲಾಯಿತು. ಇಡುವುಂಗಾಲ್ ನೆರಪ್ಪನಾಡಿಯ ಎಂ. ಜಿತಿನ್ ಮಾವಿಲ (30)ರ ಮೃತದೇಹ ನಿನ್ನೆ ಮಧ್ಯಾಹ್ನ ಊರಿಗೆ ತರಲಾಗಿದೆ. ಮಂಗಳವಾರ ಸಂಜೆ ೬ ಗಂಟೆ ವೇಳೆಗೆ ವಾಹನಗಳು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಜಿತಿನ್ ಮೃತಪಟ್ಟಿದ್ದರು. ಅಲ್ಲಿನ ಸುಲ್ತಾನ್  ಬಬೂಸ್ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್‌ನಲ್ಲಿ ವಿವಾಹ ನಡೆಯಲಿರುವ ಮಧ್ಯೆ ಸಾವು ಸಂಭವಿಸಿದೆ. ಕರಿಚ್ಚೇರಿ ದಾಮೋದರನ್ ನಾಯರ್- ಜಾನಕಿ ದಂಪತಿ ಪುತ್ರನಾದ ಮೃತರು ಸಹೋದರಿ ದಿವ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page