ಕಾಸರಗೋಡು: ಸಹೋದರಿ ನಿಧನ ಹೊಂದಿದ 12ನೇ ದಿನ ಸಹೋದರ ನಿಧನ ಹೊಂದಿದ ಘಟನೆ ನಡೆದಿದೆ. ಕಾಞಂಗಾಡ್ ಕೋಟ್ಟಪ್ಪಾರ ವಾಳಕ್ಕೋಡ್ ನಿವಾಸಿ ಎಂ.ವಿ. ಕೇಳು (70) ನಿಧನಹೊಂದಿ ದವರು. ಇವರ ಸಹೋದರಿ ಜಾನಕಿ ಅಸೌಖ್ಯ ತಗಲಿ ಎಪ್ರಿಲ್ 30ರಂದು ರಾತ್ರಿ ನಿಧನರಾಗಿದ್ದರು. ಬಿಜೆಪಿ ವಾಳಕ್ಕೋಡ್ ಬೂತ್ ಸಮಿತಿ ಅಧ್ಯಕ್ಷರಾಗಿ ಹಲವು ವರ್ಷ ಕೇಳು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಾವಿತ್ರಿ, ಮಕ್ಕಳಾದ ಪ್ರೀತಿ, ನಿತೀಶ್, ಪ್ರಭಾ, ಅಳಿಯಂದಿರಾದ ರಾಘವ ಕುಂಬಳೆ, ಶಶಿಧರನ್, ಸೊಸೆ ಸಂಗೀತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
