ಸಾಲ ನೀಡಿದ ಹಣಕ್ಕೆ ಬದಲಾಗಿ ಸೋಡಾ ಬಾಟ್ಲಿಯಿಂದ ತಲೆಗೆ ಏಟು: ಆರೋಪಿ ಸೆರೆ

ಕಾಸರಗೋಡು: ಸಾಲ ನೀಡಿದ ಹಣವನ್ನು ಹಿಂತಿರುಗಿ ಸುವುದಾಗಿ ಕರೆಸಿ ಮುಖ ಹಾಗೂ ತಲೆಗೆ ಸೋಡಾ ಬಾಟ್ಲಿಯಿಂದ ಹೊಡೆದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ.

ಉದುಮ ಪಳ್ಳಂ ಕರಿಪ್ಪೊಡಿ ಪಾಕ್ಯಾರ ಹೌಸ್‌ನ ಮುಹಮ್ಮದ್ ಇನ್ಹಾಸ್‌ರ ದೂರಿನಂತೆ ಪಾಕ್ಯಾರದ ತೌಫೀರ್‌ನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಸೋಡಾ ಬಾಟ್ಲಿಯಿಂದ ತಲೆಗೆ ಬಡಿದು ಕೊಲೆಗೈಯ್ಯಲೆತ್ನಿಸಿರುವುದಾಗಿಯೂ ಇನ್ಹಾಸ್ ಬೇಕಲ ಪೊಲೀಸರಲ್ಲಿ ದೂರಿದ್ದಾರೆ. ಸಾಲ ತೆಗೆದುಕೊಂಡ ಹಣವನ್ನು ಹಿಂತಿರುಗಿಸುವುದಾಗಿ ಹೇಳಿ ತೌಫೀರ್ ತನ್ನನ್ನು ಕರೆಸಿಕೊಂಡಿದ್ದು, ಆ ಬಳಿಕ ಆಕ್ರಮಿಸಿರುವುದಾಗಿ ದೂರಿನಲ್ಲಿ ಇನ್ಹಾಸ್ ತಿಳಿಸಿದ್ದಾರೆ. ತೌಫೀರ್ ತಿಳಿಸಿದಂತೆ ಕರಿಪ್ಪೊಡಿ ಜಂಕ್ಷನ್‌ಗೆ ತಲುಪಿದಾಗ ತನ್ನನ್ನು ತಡೆದು ನಿಲ್ಲಿಸಿ ಆಕ್ರಮಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.  ಬೇಕಲ ಡಿವೈಎಸ್‌ಪಿ ಮನೋಜ್ ವಿ.ವಿ.ಯವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಶೈನ್ ಕೆ.ಪಿ, ಎಸ್.ಐ ಅನ್ಸಾರ್, ಪೊಲೀಸರಾದ ಬಿನೀಶ್, ಪ್ರಸಾದ್ ಎಂಬಿವರು ಆರೋಪಿಯನ್ನು ಬಂಧಿಸಿದ್ದಾರೆ.

You cannot copy contents of this page