ಸಿಪಿಎಂ ಕಾರಡ್ಕ ಏರಿಯಾ ಸಮ್ಮೇಳನ ಅಡೂರಿನಲ್ಲಿ

ಮುಳ್ಳೇರಿಯ: ಸಿಪಿಎಂ ಕಾರಡ್ಕ ಏರಿಯಾ ಸಮ್ಮೇಳನ ಈ ತಿಂಗಳ 21, 22ರಂದು ಅಡೂರಿನಲ್ಲಿ ನಡೆಯ ಲಿದೆ. ಇದರಂಗವಾಗಿ 20ರಂ ದು ಧ್ವಜ, ಧ್ವಜಸ್ತಂಭ ಜಾಥಾಗಳು ವಿವಿಧ ಕಡೆಗಳಲ್ಲಿ ಉದ್ಘಾಟನೆ ಗೊಂಡು ಸಂಜೆ ೫ಗಂಟೆಗೆ ಅಡೂರಿಗೆ ತಲುಪಲಿದೆ. ಸಾರ್ವಜನಿಕ ಸಮ್ಮೇಳನ ನಡೆಯುವ ಸ್ಥಳದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಧ್ವಜಾರೋಹಣಗೈ ಯ್ಯುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಗುವುದು.

21ರಂದು ಬೆಳಿಗ್ಗೆ 9 ಗಂಟೆಗೆ ಪ್ರತಿನಿಧಿ ಸಮ್ಮೇಳನ ನಡೆಯಲಿದೆ. ಏರಿಯಾ ಸಮಿತಿ ಸದಸ್ಯರು ಸಹಿತ 130 ಪ್ರತಿನಿಧಿಗಳು  ಭಾಗವಹಿ ಸುವರು. ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಕೆ.ಪಿ. ಸತೀಶ್ಚಂದ್ರನ್, ವಿ.ಕೆ. ರಾಜನ್, ಕೆ.ವಿ, ಕುಂಞಿ ರಾಮನ್, ಕೆ.ಆರ್. ಜಯಾನಂದ, ಎಂ. ಸುಮತಿ ಭಾಗವಹಿಸುವರು. 22ರಂದು ಅಪರಾಹ್ನ ೩ ಗಂಟೆಗೆ ಪಳ್ಳಂಗೋಡಿನಿಂದ ಮೆರವಣಿಗೆ ನಡೆಯಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಮ್ಮೇಳನದಲ್ಲ್ಲಿ ಮಹಿಳಾ ಅಸೋಸಿಯೇಶನ್ ನೇತಾರೆ ಸೋಫಿಯ ಮೆಹರ್ ಪ್ರಧಾನ ಭಾಷಣ ಮಾಡುವರು.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page