ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಅದ್ದೂರಿಯ ಚಾಲನೆ

ಹೊಸದುರ್ಗ: ಸಿಪಿಎಂ ಜಿಲ್ಲಾ ಸಮ್ಮೇಳನಕ್ಕೆ ಹೊಸದುರ್ಗದಲ್ಲಿ ನಿನ್ನೆ ಅದ್ದೂರಿಯ ಚಾಲನೆ ನೀಡಲಾಗಿದೆ. ಇದು ಇಡೀ ಹೊಸದುರ್ಗ ನಗರವನ್ನೇ ಕೆಂಪುಮಯಗೊಳಿಸಿದೆ.

ಸಿಪಿಎಂ ಪೋಲಿಟ್ ಬ್ಯೂರೋ ಸದಸ್ಯ ಎ. ವಿಜಯರಾಘವನ್  ಪ್ರತಿ ನಿಧಿ ಸಮ್ಮೇಳನವನ್ನು ನಿನ್ನೆ ಉದ್ಘಾಟಿ ಸಿದರು. ಜನರಲ್ಲಿ ಕೋಮುಭಾವನೆ ಮೂಡಿಸಿ ಕೇರಳದ ಅಭಿವೃದ್ಧಿ ಬೆಳವಣಿಗೆಯನ್ನು ತಡೆಗಟ್ಟಲು ಕೆಲವರು ವ್ಯಾಪಕ ಯತ್ನ ನಡೆಸುತ್ತಿದ್ದಾರೆ. ಆದರೆ ಕೇರಳದಲ್ಲಿ ಕೆಂಪು ಧ್ವಜ ಹಾರಾಡುವ ತನಕ  ಅಂತಹ ಯತ್ನಗಳನ್ನು  ಎದುರಿಸಿ ಹಿಮ್ಮೆಟ್ಟಿಸಲಾಗುವುದೆಂದು ವಿಜಯರಾಘವನ್ ನುಡಿದರು.

ಕಳೆದ ಸಂಸತ್ ಚುನಾವಣೆಯಲ್ಲಿ ಕೇರಳದಲ್ಲಿ  ಕೋಮು ಧ್ರುವೀಕರಣ ನಡೆಸಲು ಎದುರಾಳಿಗೆ ಸಾಧ್ಯವಾಗಿದೆ.  ಈ ಚುನಾವಣೆಯಲ್ಲಿ ಕೋಮು ಧ್ರುವೀಕರಣ  ಕಾರಣದಿಂದ ಎಡರಂಗಕ್ಕೆ ಉಂಟಾದ  ಅಲ್ಪ ಹಿನ್ನಡೆಯಿಂದಾಗಿ   ಅಂತಹ ಧ್ರುವೀಕರಣ ನೀತಿಯನ್ನು ಎದುರಾಳಿ ಗಳು ಇನ್ನೂ ಮುಂದುವರಿಸುತ್ತಿದ್ದಾರೆ. ಯುಡಿಎಫ್ ಕೋಮುವಾದ ಧ್ರುವೀಕರಣದ ರಾಯಬಾರಿ (ಅಂಬಾಸಿಡರ್) ಆಗಿ ಇಂದು ಮಾರ್ಪಟ್ಟಿದೆ. ಕೋಮುವಾದಿ ಗಳ ಬೆಂಬಲದಿಂದಲೇ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೇರಳದಲ್ಲಿ ಗೆದ್ದಿದ್ದಾರೆ ಎಂಬುವುದನ್ನು ಎಲ್ಲರೂ ಮನಗಾಣಬೇಕಾಗಿದೆ. ವನ್ಯಜೀವಿಗಳ ದಾಳಿಯ ಹೆಸರಲ್ಲ್ಲೂ ಯುಡಿಎಫ್ ಕೋಮುವಾದ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.

ಅನ್ಯಮತಕ್ಕೆ ಸೇರಿದ ಯುವತಿ ಯನ್ನು ಪ್ರೀತಿಸಿ ಮದುವೆಯಾಗುವ ವರಿಗೆ ೨೦ ವರ್ಷ ಸೆರೆಮನೆವಾಸ ನೀಡುವ ರೀತಿಯ  ಕಾನೂನು ಸೃಷ್ಟಿಸಲು ಆರ್‌ಎಸ್‌ಎಸ್ ಇನ್ನೊಂ ದೆಡೆ ಯತ್ನಿ ಸುತ್ತಿದೆ. ಇಂತಹ ಯತ್ನ ಆರ್‌ಎಸ್‌ಎಸ್ ಗಲ್ಲದೆ ಇತರ ಯಾರಿಗಾದರೂ ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page