ಸಿಪಿಎಂ ಶಾಂತಿನಗರ ಬ್ರಾಂಚ್ ಸಮಿತಿ ಕಚೇರಿಗೆ ಶಿಲಾನ್ಯಾಸ
ಮೀಯಪದವು: ಸಿಪಿಎಂ ಕುಳೂರು ಶಾಂತಿನಗರ ಬ್ರಾಂಚ್ ಸಮಿತಿ ಕಚೇರಿ ಲಿಂಗಪ್ಪ ಪೂಜಾರಿ ಸ್ಮಾರಕ ಮಂದಿರಕ್ಕೆ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್ ಶಿಲಾನ್ಯಾಸ ಗೈದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಮುಖ್ಯ ಅತಿಥಿಗಳಾಗಿದ್ದರು. ಜನಾರ್ದನ ಪೂಜಾರಿ ಅಧ್ಯಕ್ಷತೆ ವಹಿಸಿದರು. ಚಂದ್ರಹಾಸ ಪೂಜಾರಿ ಪಕ್ಷದ ಕಚೇರಿಗೆ ಬೇಕಾಗಿ ಕೇಮಜಾಲು ಎಂಬಲ್ಲಿ ೩ ಸೆಂಟ್ಸ್ ಸ್ಥಳವನ್ನು ಉಚಿತವಾಗಿ ನೀಡಿದ್ದರು. ಇಲ್ಲಿ ಮಂದಿರಕ್ಕೆ ಶಿಲಾನ್ಯಾಸ ನಡೆಸಲಾಗಿದೆ. ಮುಖಂಡರಾದ ಡಿ ಕಮಲಾಕ್ಷ, ಸಾದಿಕ್ ಚೆರುಗೋಳಿ, ಲೋಕೇಶ್ ಸಿ, ಬಾಳಪ್ಪ ಬಂಗೇರ, ಪ್ರಭಾಕರ ಶೆಟ್ಟಿ, ಸತೀಶ್ ಎಲಿಯಾಣ, ಚಂದ್ರಾವತಿ, ಸರಸ್ವತಿ, ಉದಯ ಸಿ.ಎಚ್, ರವಿಪ್ರಸಾದ್ ಉಪಸ್ಥಿತರಿದ್ದರು. ದಯಾನಂದ ಶೆಟ್ಟಿ ಸ್ವಾಗತಿಸಿ, ಪದ್ಮಜಾ ವಂದಿಸಿದರು.